ಕಡಬ: ಮಸಾಜ್ ಪಾರ್ಲರ್ ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಸೆ.24. ಇಲ್ಲಿನ ಮಸಾಜ್ ಪಾರ್ಲರ್ ವೊಂದರ ಮಾಲಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ನೊಂದ ಮಹಿಳೆ ಇದೀಗ ಕಡಬ ಠಾಣೆಗೆ ದೂರು ನೀಡಿದ್ದಾರೆ.

ಇಲ್ಲಿನ ಕಳಾರ ಸಮೀಪ ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನಲ್ಲಿ ಕೇರಳದ ವಯನಾಡ್ ನಿವಾಸಿ ಮಸಾಜ್ ಸೆಂಟರ್ ನಡೆಸುತ್ತಿದ್ದು, ಈ ನಡುವೆ ಅಲ್ಲಿಗೆ ಬರುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇಂದು ರಾತ್ರಿ ನೊಂದ ಮಹಿಳೆಯೋರ್ವರು ಕಡಬ ಠಾಣೆಗೆ ದೂರು ನೀಡಿದ್ದು, ಆರೋಪಿ ಅಬ್ರಹಾಂ ನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.

Also Read  ಕೈಮಗ್ಗ ಮತ್ತು ಜವಳಿ ಇಲಾಖೆ ➤ ಸಿದ್ಧ ಉಡುಪು ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನ

 

 

 

error: Content is protected !!
Scroll to Top