ಗತಿ ಇಲ್ಲದವರು ನನ್ನನ್ನು ಸಾಕಬೇಡಿ ➤ ಹೀಗೆಂದು ಕಡಬದಲ್ಲಿ ಆಡಿನ ಮೇಲೆ ಬರೆದ ಪೋಸ್ಟರ್ ವೈರಲ್

(ನ್ಯೂಸ್ ಕಡಬ) newskadaba.com ಕಡಬ, ಸೆ.14. ಸಾಕು ಪ್ರಾಣಿಗಳನ್ನು ಬೀದಿಗೆ ಬಿಡುವವರ ವಿರುದ್ಧ ಕಡಬ ಪಟ್ಟಣ ಪಂಚಾಯತ್ ದಂಡ ವಿಧಿಸುತ್ತಿರುವುದರ ಮಧ್ಯೆಯೇ ಸಾಕು ಪ್ರಾಣಿಗಳ ಉಪಟಳದಿಂದ ಬೇಸತ್ತಿರುವ ಸಾರ್ವಜನಿಕರು ಬೀದಿಯಲ್ಲಿರುವ ಆಡಿನ ಕತ್ತಿಗೆ ಪ್ಲೇಕಾರ್ಡ್ ಕಟ್ಟಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳು ರಸ್ತೆಯಲ್ಲೇ ಅಡ್ಡಾಡುವುದರಿಂದಾಗಿ ಅದೆಷ್ಟೋ ಅಪಘಾತಗಳು ಸಂಭವಿಸಿ, ಹಲವಾರು ಮಂದಿ ಗಾಯಗೊಂಡಿದ್ದಾರೆ. ಆದರೆ ಇದೀಗ ಆಡುಗಳನ್ನು ರಸ್ತೆಗೆ ಬಿಡುವವರಿಗೆ ಸಾರ್ವಜನಿಕರೇ ಎಚ್ಚರಿಕೆ ನೀಡಲಾರಂಭಿಸಿದ್ದು, ಗತಿ‌ ಇಲ್ಲದವರು ನನ್ನನ್ನು ಸಾಕಬೇಡಿ, ದಯಮಾಡಿ ಬೈಕ್ ಸವಾರರ ಸಾವಿಗೆ ನನ್ನನ್ನು ಕಾರಣ ಮಾಡಬೇಡಿ ಎಂದು ಬರೆದ ಪ್ಲೇಕಾರ್ಡ್ ತೂಗು ಹಾಕಲಾಗಿದೆ.

Also Read  ಶಸ್ತ್ರಾಸ್ತ್ರಗಳ ಠೇವಣಿ ➤ ಪರಿಷ್ಕøತ ಆದೇಶ

 

 

 

error: Content is protected !!
Scroll to Top