ಕಡಬ: ಕಿಡ್ಸ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ಕರ್ನಾಟಕ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಸೊಸೈಟಿ (ಕಿಡ್ಸ್) ಪುತ್ತೂರು ಧರ್ಮಪ್ರಾಂತ್ಯ, ಕಾರೀತಾಸ್ ಇಂಡಿಯಾ ಸಹಯೋಗದಲ್ಲಿ ಪಟ್ಟಣ ಪಂಚಾಯತ್ ಕಡಬ ಮತ್ತು ಸಮುದಾಯ ಅರೋಗ್ಯ ಕೇಂದ್ರ ಕಡಬದ ಸಹಕಾರದಲ್ಲಿ ಕಡಬ ಸಮುದಾಯ ಅರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಕೊರೋನಾ ವಾರಿಯರ್ಸ್‌ ಗಳಾದ 25 ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್ ಗಳನ್ನು ಸಂಸ್ಥೆಯ ವತಿಯಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯಾಧಿಕಾರಿ ಶ್ರೀಮತಿ ಸುಚಿತ್ರ ರಾವ್, ಕಡಬ ಪಟ್ಟಣ ಪಂಚಾಯತ್ ಕೋವಿಡ್ 19 ನಿಯಂತ್ರಣಾಧಿಕಾರಿ ಹರೀಶ್ ಬೆದ್ರಾಜೆ, ಮುಖ್ಯ ಆಶಾ ಕಾರ್ಯಕರ್ತೆ ಶ್ರೀಮತಿ ಆಶಾ, ಕಿಡ್ಸ್ ವಲಯಾಧಿಕಾರಿ ಮನೋಜ್, ಸಂಯೋಜಕರಾದ ಎನ್.ಟಿ. ತೋಮಸ್, ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Also Read  ಉಡುಪಿ: ಹೂಡೆಯಲ್ಲಿ ಗೂಡ್ಸ್ ವಾಹನಕ್ಕೆ ಬೆಂಕಿ; ತಪ್ಪಿದ ಅನಾಹುತ

 

 

 

 

error: Content is protected !!
Scroll to Top