(ನ್ಯೂಸ್ ಕಡಬ) newskadaba.com ಕಡಬ, ಅ.31. ಕಡಬ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಹಝ್ರತ್ ಅಸಯ್ಯದ್ ಅಬ್ದುಲ್ ಖಾದಿರ್ ಷಾ ವಲಿಯುಲ್ಲಾಹಿ ಹಾಗೂ ಶುಹದಾಖಲ್ (ಖ.ಸಿ)ರವರ ದರ್ಗಾಶರೀಫ್ನಲ್ಲಿ ಮಾಸಿಕ ಕೂಟು ಝಿಯಾರತ್ ಹಾಗೂ ದಿಕ್ರ್ ಮಜ್ಲಿಸ್ ಕಾರ್ಯಕ್ರಮ ಆದಿತ್ಯವಾರ ನಡೆಯಿತು.
ಕಡಬ ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ ಉಸ್ತಾದ್ರವರು ಕೂಟು ಝಿಯಾರತ್ನ ನೇತೃತ್ವ ವಹಿಸಿ ದುಃವಾ ಪ್ರಾರ್ಥನೆ ನೆರವೇರಿಸಿ ಇಲ್ಲಿಯ ಅವುಲಿಯಾಗಳ ಹಾಗೂ ಶುಹದಾಖಲ್ಗಳ ಕಸುಬು ಕರಾಮತಿನಿಂದ ಅದೆಷ್ಟೋ ಊರಪರವೂರ ಪುರುಷ ಮಹಿಳೆಯರು ಮಕ್ಕಳು ತನ್ನ ಸಂಕಷ್ಟಗಳನ್ನು ಅವುಲಿಯಾರವರ ಮುಖಾಂತರ ಅಲ್ಲಾಹುವಿನಲ್ಲಿ ಬೇಡಿಕೊಂಡಂತೆ ಯಾವುದೇ ಆಸ್ಪತ್ರೆಗಳಲ್ಲಿ ಗುಣವಾಗದಿರುವ ದೊಡ್ಡ ದೊಡ್ಡ ಕಾಯಿಲೆಗಳು ಗುಣಮುಖವಾಗುತ್ತಿದ್ದು ದೂರದೂರದ ಊರುಗಳಿಂದ ಬಂದು ಇಲ್ಲಿ ಪ್ರಾರ್ಥಿಸುವುದರೊಂದಿಗೆ ಕೂಟು ಝಿಯಾರತ್ನಲ್ಲಿ ಭಾಗವಹಿಸಿ ದಿಕ್ರ್ ಮಜ್ಲಿಸ್ನಲ್ಲಿ ಪ್ರಯೋಜನ ಪಡೆಯುವಂತಾಗಿದೆ. ಇಲ್ಲಿಯ ಕರಾಮತ್ ಏನೆಂದು ಪ್ರತಿಯೊಬ್ಬರಿಗೂ ತಾನಾಗಿಯೇ ಅರ್ಥವಾಗುತ್ತಿದೆ ಎಂದು ಎಲ್ಲರಿಗೂ ಅಲ್ಲಾಹು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ಕಳಾರ ಮುಹಮ್ಮದೀಯ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಸ್ವಲಾಂ ಅಮಾನಿಯವರು ಪ್ರಭಾಷಣಗೈದು ಸತ್ಯ ಧರ್ಮ ನ್ಯಾಯ ನೀತಿಯಿಂದ ಬಾಳುವುದಲ್ಲದೆ ಇನ್ನೊಬ್ಬರಿಗೆ ನೋವಾಗದಂತೆ ಇತರರ ಬಗ್ಗೆ ಪಿತ್ನ ಪಸಾದ್ ನಡೆಸದೇ ಎಲ್ಲರನ್ನು ಆತ್ಮೀಯತೆಯಿಂದ ಪ್ರೀತಿಯಿಂದ ಗೌರವಿಸುವುದರೊಂದಿಗೆ ಸಜ್ಜನರಾಗಿ ಬಾಳುವುದು ಇಸ್ಲಾಂ ಧರ್ಮದ ಸಾರವಾಗಿದೆ. ಇದನ್ನರಿತು ಬಾಳಿದರೆ ಇಹಪರಗಳಲ್ಲಿ ವಿಜಯಿಗಳಾಗಿ ಜನ್ನತ್ ಪ್ರಾಪ್ತವಾಗಲು ಸಾಧ್ಯ ಎಂದರು.
ಜಮಾಅತಿನ ಅಧ್ಯಕ್ಷ ಮಹಮ್ಮದ್ ಶರೀಫ್ ಅಡ್ಡಗದ್ದೆ, ಉಪಾಧ್ಯಕ್ಷ ಆದಂ ಕುಂಡೋಳಿ, ಮಾಜಿ ಉಪಾಧ್ಯಕ್ಷ ಹಾಜಿ ಇಸ್ಮಾಯಿಲ್ ಸಾಹೇಬ್, ಸ್ವಲಾತ್ ಕಮಿಟಿ ಮಾಜಿ ಅಧ್ಯಕ್ಷ ಕೆ.ಎಸ್ ಅಬ್ದುಲ್ ಖಾದರ್, ಮಾಜಿ ಕಾರ್ಯದರ್ಶಿ ಹಾಜಿ ಎಚ್.ಕೆ ಹಮೀದ್ ಸಾಹೇಬ್, ಸದಸ್ಯರಾದ ಅಬ್ದುಲ್ ಆಜಿ ಮೂರಾಜೆ, ಅಕ್ಬರ್ ಸಾಹೇಬ್ ಕೇಪು, ಶೆರೀಫ್ ಸಾಹೇಬ್ ಮಣಿಮುಂಡ, ಅಬ್ದುಲ್ ಖಾದರ್ ಕೇಪು, ಇಬ್ರಾಹಿಂ ಅಲೆಕ್ಕಾಡಿ ಸೇರಿದಂತೆ ಜಮಾಅತ್ ಆಡಳಿತ ಮಂಡಳಿ, ಜಮಾಅತರು ಇತರ ಜಮಾಅತರು ಆಗಮಿಸಿದ್ದಲ್ಲದೆ ದೂರದೂರದ ಶಿವಮೊಗ್ಗ, ತೀರ್ಥಹಳ್ಳಿ, ಅರಕಲಗೋಡು, ಸಕಲೇಶ್ಪುರ, ಹಾನ್ಬಲ್, ಮಡಿಕೇರಿ, ಕುಶಾಲನಗರ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಕಾಸರಗೋಡು, ಕಣ್ಣೂರು, ತಲಚ್ಚೇರಿ, ಭಾಗಗಳಿಂದ ಹಲವಾರು ತಮ್ಮ ಸಂಕಷ್ಟಗಳಿಗೆ ಪರಿಹಾರಕ್ಕಾಗಿ ಬಂದು ಕೂಟು ಝಿಯಾರತ್ನಲ್ಲಿ ಭಾಗವಹಿಸಿದ್ದರು. ಕೇಂದ್ರ ಜುಮ್ಮಾ ಮಸೀದಿಯ ಇಮಾಮ್ರಾದ ರಿಯಾದ್ ಸಹದಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಅವುಲಿಯಾಗಳ ಮಹತ್ವವನ್ನು ವಿವರಿಸಿದರು. ಕೇಂದ್ರ ಜುಮ್ಮಾ ಮಸೀದಿಯ ಸದರ್ ಮುಹಲ್ಲಿಂ ಹನೀಫ್ ಲತೀಫಿ ವಂದಿಸಿದರು. ಕೇಂದ್ರ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಫೈಝಲ್ ಎಸ್ಇಎಸ್ ಹಾಗೂ ಜೊತೆಕಾರ್ಯದರ್ಶಿ ಇಬ್ರಾಹಿಂ ಕೋಡಿಬೈಲ್ ಸಹಕರಿಸಿದರು. ಬಳಿಕ ಎಲ್ಲರಿಗೂ ಚಿಕನ್ ಬಿರಿಯಾನಿ ಶೀರ್ಣಿ ವಿತರಿಸಲಾಯಿತು.