ಕಡಬ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಸೆ.06. ಇಲ್ಲಿಗೆ ಸಮೀಪದ ನೆಟ್ಟಣ ರೈಲ್ವೇ ನಿಲ್ದಾಣದ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಸೋಮವಾರದಂದು ಪತ್ತೆಯಾಗಿದೆ.

ರೈಲು ನಿಲ್ದಾಣದ ಪಕ್ಕದ ಗುಡ್ಡದಲ್ಲಿ ಮಲಗಿರುವ ಸ್ಥಿತಿಯಲ್ಲಿ ಈ ಮೃತದೇಹ ಪತ್ತೆಯಾಗಿದೆ. ಬಾಯಿಯಲ್ಲಿ ರಕ್ತದ ಕಲೆ ಕಂಡುಬಂದಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವುದು ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ. ಸ್ಥಳೀಯರು ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಮಂಗಳೂರು: ಗೃಹರಕ್ಷಕ ಕ್ಷೇಮಾಭಿವೃದ್ದಿ ನಿಧಿಯಿಂದ ಸಹಾಯ ಧನ

 

 

error: Content is protected !!
Scroll to Top