ಕಡಬ ತಾಲೂಕಿನ ಕೊರೋನಾ ಮುಕ್ತ ಗ್ರಾಮಕ್ಕೆ ಮತ್ತೊಂದು ‘ಸಿರಿ’ ➤ 100% ವ್ಯಾಕ್ಸಿನೇಷನ್‌ ಆದ ಕಡಬದ ಏಕೈಕ ಗ್ರಾಮ ಯಾವುದು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ಸೆ.03. ತಾಲೂಕಿನ ಕೊಂಬಾರು ಗ್ರಾಮ ಪಂಚಾಯತ್ ನ ಸಿರಿಬಾಗಿಲು ಗ್ರಾಮದಲ್ಲಿ ಶೇ.100 ಕೊರೋನಾ ಲಸಿಕೆ ನೀಡಲಾಗಿದ್ದು, ಸಂಪೂರ್ಣ ಕೊರೋನಾ ಲಸಿಕೆ ನೀಡಲಾದ ಕಡಬ ತಾಲೂಕಿನ ಏಕೈಕ ಗ್ರಾಮವಾಗಿ ಗುರುತಿಸಿಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 6 ಗ್ರಾಮ ಪಂಚಾಯತ್ ಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಲಾಗಿದ್ದು, ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ 561 ಮಂದಿಯಲ್ಲಿ 561 ಮಂದಿಗೆ ಲಸಿಕೆ ಪಡೆಯುವ ಮೂಲಕ ಮತ್ತೆ ಹೆಸರು ಮುನ್ನೆಲೆಗೆ ಬಂದಿದೆ. ಈ ಹಿಂದೆ ಸಿರಿಬಾಗಿಲು ಗ್ರಾಮವು ಕೊರೋನಾ ಮುಕ್ತ ಗ್ರಾಮವಾಗಿ ಜಿಲ್ಲಾಧಿಕಾರಿಗಳ ಪ್ರಶಂಸೆಗೂ ಪಾತ್ರವಾಗಿತ್ತು.

Also Read  ಅಡುಗೆ ಅನಿಲ ವಿತರಕರಿಗೆ ಹೆಚ್ಚುವರಿ ಹಣ ನೀಡದಂತೆ ದ.ಕ. ಜಿಲ್ಲಾಧಿಕಾರಿ ಸೂಚನೆ

 

 

 

error: Content is protected !!
Scroll to Top