ವೀಕೆಂಡ್ ಕರ್ಫ್ಯೂ ವೇಳೆ ವ್ಯಾಪಾರ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ➤ ಪುತ್ತೂರು ಸಹಾಯಕ ಆಯುಕ್ತರ ಖಡಕ್ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.03. ವೀಕೆಂಡ್ ಕರ್ಫ್ಯೂ ವೇಳೆ ಅಂಗಡಿ ಮುಂಗಟ್ಟು ತೆರೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ಸಹಾಯಕ ಕಮಿಷನರ್ ಅವರು ಉಪ ವಿಭಾಗದ ಎಲ್ಲಾ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂನಿಂದ ವ್ಯಾಪಾರ ವ್ಯವಹಾರಕ್ಕೆ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗುವುದರಿಂದ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂವನ್ನು ಪ್ರೋತ್ಸಾಹಿಸುವುದಿಲ್ಲ ಎಂಬುದಾಗಿ ಪುತ್ತೂರು ವರ್ತಕರ ಸಂಘ ಸೇರಿದಂತೆ ಹಲವು ಸಂಘಟನೆಯವರು ಜಿಲ್ಲಾಡಳಿತದ ಆದೇಶಕ್ಕೆ ಸೆಡ್ಡು ಹೊಡೆದಿದ್ದರು. ಇದೀಗ ವೀಕೆಂಡ್ ಕರ್ಪ್ಯೂ ಸಡಿಲಗೊಳಿಸಿ ವ್ಯಾಪಾರ ವಹಿವಾಟು, ಸಾರ್ವಜನಿಕ ಸಂಚಾರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದಲ್ಲಿ ಸಾರ್ವಜನಿಕವಾಗಿ ಕೂರೋನಾ ಸೋಂಕು ವ್ಯಾಪಕವಾಗಿ ಹರಡುವ ಸಂಭವ ಇರುವುದರಿಂದ ಮಾನ್ಯ ಜಿಲ್ಲಾಧಿಕಾರಿಯವರು ಹಾಗೂ ಜಿಲ್ಲಾ ದಂಡಾಧಿಕಾರಿಯವರ ಮುಂದಿನ ಆದೇಶದವರೆಗೆ ಪ್ರತೀ ಶನಿವಾರ ಹಾಗೂ ಭಾನುವಾರದಂದು ವೀಕೆಂಡ್ ಕರ್ಪ್ಯೂ ಮತ್ತು ನೈಟ್ ಕರ್ಪ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

Also Read  10 ವರ್ಷಗಳಲ್ಲಿ 8 ಜನರನ್ನು ಮದುವೆಯಾಗಿ ವಂಚಿಸಿದ ಮಹಿಳೆ

ವರ್ತಕರ ಸಂಘದವರು ಹಾಗೂ ಇನ್ನಿತರೇ ವ್ಯಾಪಾರಸ್ಥರು , ಸಾರ್ವಜನಿಕರು, ನಿಯಮಾವಳಿಗಳನ್ನು ಮೀರಿ ಕಾನೂನು ಉಲ್ಲಂಘನೆ ಮಾಡಿ ವ್ಯಾಪಾರ ವಹಿವಾಟು ನಡೆಸಿದಲ್ಲಿ ತಮ್ಮ ತಮ್ಮ ಅಧಿಕಾರ ವ್ಯಾಪ್ತಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ಹಾಗೂ ದಂಡ ವಿಧಿಸುವಂತೆ ಎಲ್ಲಾ ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿ ಆದೇಶದಲ್ಲಿ ತಿಳಿಸಲಾಗಿದೆ.

 

 

 

error: Content is protected !!
Scroll to Top