(ನ್ಯೂಸ್ ಕಡಬ) newskadaba.com ಕಡಬ, ಆ.03. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ವೇಳೆಯಲ್ಲಿ ಅಂಗಡಿ ತೆರೆಯಲು ಅವಕಾಶ ನೀಡುವಂತೆ ಆಗ್ರಹಿಸಿ ಕಡಬದ ವರ್ತಕರು ಕಡಬ ತಾಲೂಕು ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕಡಬ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಕಳೆದ ಒಂದೂವರೆ ವರ್ಷಗಳಿಂದ ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಫ್ಯಾನ್ಸಿ ಅಂಗಡಿಗಳು, ಪ್ರಿಂಟಿಂಗ್ ಪ್ರೆಸ್, ಮೊಬೈಲ್ ಅಂಗಡಿ, ಇಲೆಕ್ಟ್ರಾನಿಕ್ಸ್ ಅಂಗಡಿ, ಜುವೆಲ್ಲರಿ ಶಾಪ್, ಟೈಲರಿಂಗ್ ಶಾಪ್, ಬುಕ್ ಸ್ಟಾಲ್, ಫೋಟೋ ಸ್ಟುಡಿಯೋ, ಸೆಲೂನ್ ಹಾಗೂ ಇನ್ನಿತರ ಹಲವಾರು ಉದ್ಯಮಗಳು ಲಾಕ್ ಡೌನ್‌ನಿಂದಾಗಿ ಮತ್ತು ವೀಕೆಂಡ್ ಕರ್ಫ್ಯೂ ನಿಂದಾಗಿ ಕಷ್ಟ ನಷ್ಟಗಳಿಗೆ ಒಳಗಾಗಿದ್ದು (ಕಟ್ಟಡ ಬಾಡಿಗೆ ಕಾರ್ಮಿಕರ ಸಂಬಳ, ವಿದ್ಯುತ್ ಬಳಕೆ ಇಲ್ಲದಿದ್ದರೂ ನಿಗದಿತ ಶುಲ್ಕ, ಪಂಚಾಯತ್ ಕಸ ವಿಲೇವಾರಿ ಟ್ಯಾಕ್ಸ್, ಕುಡಿಯುವ ನೀರಿನ ಟ್ಯಾಕ್ಸ್, ವ್ಯಾಪಾರ ಲೈಸನ್ಸ್ ಬಗ್ಗೆ ಹಾಗೂ ಇನ್ನಿತರ ತೊಂದರೆಗಳು) ಈ ಸಮಯದಲ್ಲಿ ಶನಿವಾರ ಹಾಗೂ ಆದಿತ್ಯವಾರ ವ್ಯವಹಾರ ನಡೆಸದಂತೆ ಸರಕಾರದ ತೀರ್ಮಾನ ಸರಿಯಲ್ಲ. ರಾಜ್ಯದ ಬಹುತೇಕ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ವ್ಯವಹಾರ ನಡೆಯುತ್ತಲಿದ್ದು, ಕಡಬ ತಾಲೂಕಿನಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡದೇ ಇದ್ದಲ್ಲಿ ಸರಕಾರ, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.