ಕಡಬ: ನೀರುಪಾಲಾದ ಯುವಕನ ಮೃತದೇಹ ಉಪ್ಪಿನಂಗಡಿಯಲ್ಲಿ ಪತ್ತೆ ➤ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದ ಯುವಕ

(ನ್ಯೂಸ್ ಕಡಬ) newskadaba.com ಕಡಬ, ಸೆ.01. ನದಿ ನೀರಿನ ಸೆಳೆತಕ್ಕೆ ನೀರುಪಾಲಾದ ಯುವಕನ ಮೃತದೇಹವು ಇಂದು ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದೆ.

ಬುಧವಾರ ಸಂಜೆ ಕಡಬ ಸಮೀಪದ ಕೆಮ್ಮಾರ ಸೇತುವೆಯ ಬಳಿ ಸ್ಥಳೀಯ ನಿವಾಸಿ ಶಫೀಕ್(19) ಎಂಬಾತ ನೀರುಪಾಲಾಗಿದ್ದ. ವಿಪರೀತ ಮಳೆಯ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಜೋರಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಉಪ್ಪಿನಂಗಡಿ ಪೊಲೀಸರು ಊರವರ ಸಹಾಯದಿಂದ ಯುವಕನ ಶೋಧ ಕಾರ್ಯವನ್ನು ಆರಂಭಿಸಿದ್ದರು. ಬುಧವಾರ ರಾತ್ರಿಯಾದರೂ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಶೋಧ ಕಾರ್ಯ ಆರಂಭಿಸಲಾಗಿದ್ದು, ಗುರುವಾರ ಸಂಜೆ ವೇಳೆಗೆ ಉಪ್ಪಿನಂಗಡಿಯ ನೇತ್ರಾವತಿ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ.

Also Read  ಕಡಬ: ಬಲಾತ್ಕಾರವಾಗಿ ಅತ್ಯಾಚಾರಗೈದುದರಿಂದ ಗರ್ಭಿಣಿಯಾದ 13ರ ಹರೆಯದ ಬಾಲಕಿ ➤ ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

 

 

 

error: Content is protected !!
Scroll to Top