ಕಡಬ: ನೀರುಪಾಲಾದ ಯುವಕನ ಶೋಧ ಕಾರ್ಯ ಮತ್ತೆ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ನದಿ ನೀರಿನ ಸೆಳೆತಕ್ಕೆ ನೀರುಪಾಲಾದ ಯುವಕನ ಶೋಧ ಕಾರ್ಯವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಆರಂಭಿಸಿದ್ದಾರೆ.

ಬುಧವಾರ ಸಂಜೆ ಕಡಬ ಸಮೀಪದ ಕೆಮ್ಮಾರ ಸೇತುವೆಯ ಬಳಿ ಸ್ಥಳೀಯ ನಿವಾಸಿ ಶಫೀಕ್(19) ಎಂಬಾತ ನೀರುಪಾಲಾಗಿದ್ದ. ವಿಪರೀತ ಮಳೆಯ ಹಿನ್ನೆಲೆಯಲ್ಲಿ ನದಿಯಲ್ಲಿ ನೀರಿನ ಹರಿವು ಜೋರಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಉಪ್ಪಿನಂಗಡಿ ಪೊಲೀಸರು ಊರವರ ಸಹಾಯದಿಂದ ಯುವಕನ ಶೋಧ ಕಾರ್ಯವನ್ನು ಆರಂಭಿಸಿದ್ದರು. ಬುಧವಾರ ರಾತ್ರಿಯಾದರೂ ಯಾವುದೇ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನುಳ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಿಗ್ಗೆ ಮತ್ತೆ ಎರಡು ತಂಡಗಳಾಗಿ ನಾಪತ್ತೆಯಾದ ಯುವಕನ ಪತ್ತೆ ಕಾರ್ಯವನ್ನು ಆರಂಭಿಸಲಾಗಿದೆ.

Also Read  ಪುತ್ತೂರು: ನಿವೃತ್ತ ಎಎಸ್ಐ ನೇಣು ಬಿಗಿದು ಆತ್ಮಹತ್ಯೆ

 

 

 

error: Content is protected !!
Scroll to Top