ಸುಬ್ರಹ್ಮಣ್ಯ – ಧರ್ಮಸ್ಥಳ ಹೆದ್ದಾರಿಯಲ್ಲಿ ಮರಣ ಮೃದಂಗ ಬಾರಿಸುತ್ತಿರುವ ವಾಹನ ➤ ಕಳೆದ 10 ತಿಂಗಳಿಂದ ರಸ್ತೆ ಮಧ್ಯೆ ಕೆಟ್ಟು ನಿಂತ ಬೃಹತ್ ಕ್ರೇನ್

(ನ್ಯೂಸ್ ಕಡಬ) newskadaba.com ಕಡಬ, ಸೆ.01. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಕ್ರೇನ್ ಒಂದು ಕಳೆದ ಒಂಭತ್ತು ತಿಂಗಳುಗಳಿಂದ ಮರಣ ಮೃದಂಗ ಬಾರಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ.

ರೈಲು ಮಾರ್ಗದ ಕೆಲಸಕ್ಕೆಂದು ಆಗಮಿಸಿದ್ದ ಕ್ರೇನ್ ಕಳೆದ ಹತ್ತು ತಿಂಗಳುಗಳಿಂದ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ರಸ್ತೆ ಮಧ್ಯದಲ್ಲಿ ಹಾಳಾಗಿ ನಿಂತಿದ್ದು, ಅದರ ಬಿಡಿ ಭಾಗಗಳು ಈಗಾಗಲೇ ಕಳ್ಳ ಕಾಕರ ಪಾಲಾಗಿದೆ. ಪಕ್ಕದಲ್ಲೇ ಅವೈಜ್ಞಾನಿಕ ತಿರುವಿದ್ದು, ಹಲವಾರು ಸಣ್ಣಪುಟ್ಟ ಅಪಘಾತಗಳಿಗೆ ಕಾರಣವಾಗಿದೆ. ಕ್ರೇನ್‌ನ ಕೆಲವು ಯಂತ್ರಗಳನ್ನು ತೆಗೆದು ಹೊರಗೆ ಇಡಲಾಗಿದ್ದು, ಸಣ್ಣಪುಟ್ಟ ಕಬ್ಬಿಣದ ವಸ್ತುಗಳನ್ನು ಸಾಧ್ಯವಾದಷ್ಟು ಕಳ್ಳರು ಹೊತ್ತೊಯ್ದಿದ್ದಾರೆ‌. ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಬೃಹತ್ ಕ್ರೇನ್ ಅಪಾಯವನ್ನು ಆಹ್ವಾನಿಸುವಂತಿದೆ. ಅದೆಷ್ಟೋ ಅಧಿಕಾರಿಗಳು ಇದೇ ದಾರಿಯಿಂದಾಗಿ ತೆರಳುತ್ತಿದ್ದರೂ ಕಣ್ಣಿದ್ದು ಕುರುಡಾಗಿದ್ದಾರೆ. ರಸ್ತೆಯಂಚಿನಲ್ಲಿ ವಾಹನಗಳನ್ನು ಕೆಲಕಾಲ ನಿಲ್ಲಿಸಿದರೆ ದಂಡ ವಿಧಿಸುವ ಅಧಿಕಾರಿಗಳು ಕ್ರೇನ್ ವಿಚಾರದಲ್ಲಿ ಮಾತ್ರ ಮೌನವಾಗಿರುವುದು ಸಾರ್ವಜನಿಕರಲ್ಲಿ ಸಂಶಯವನ್ನು ಮೂಡಿಸಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವರೇ ಕಾದು ನೋಡಬೇಕಾಗಿದೆ.

Also Read  ಉಪ್ಪಿನಂಗಡಿ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಮಹಮ್ಮದ್ ಓಟೆಚ್ಚಾರು ಆಯ್ಕೆ

 

 

 

error: Content is protected !!
Scroll to Top