ನೋಟರಿ ನ್ಯಾಯವಾದಿ ಮನೋಹರ್ ಸಬಳೂರ್ ಅವರ ಕಛೇರಿ ಸ್ಥಳಾಂತರಗೊಂಡು ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.01. ಇಲ್ಲಿನ ಯಶೋದಾ ಸೂಪರ್‌ ಶಾಪ್‌ ನ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ನೋಟರಿ ವಕೀಲರಾದ ಮನೋಹರ್ ಸಬಳೂರ್ ಅವರ ಕಛೇರಿಯು ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿರುವ ಎಪಿಎಂಸಿ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ನೂತನ ಕಛೇರಿಯನ್ನು ಅಚ್ಚುತ ಪ್ರಭು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ| ಸದಾನಂದ ರಾವ್, ನಿವೃತ್ತ ಗ್ರಾಮಕರಣಿಕರಾದ ಕೃಷ್ಣಪ್ಪ ಗೌಡ ಸಬಳೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಳೆದ ಹಲವು ವರ್ಷಗಳಿಂದ ಕಡಬದಲ್ಲಿ ನೋಟರಿ ನ್ಯಾಯವಾದಿ ಹಾಗೂ ದಸ್ತಾವೇಜು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಮನೋಹರ್ ಸಬಳೂರ್ ಅವರು ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.

Also Read  ಕಡಬ: ದ್ವಿಚಕ್ರ ವಾಹನ ಢಿಕ್ಕಿ- ಪಾದಚಾರಿ ಮಹಿಳೆ ಮೃತ್ಯು

 

 

 

error: Content is protected !!
Scroll to Top