ಕಡಬ: ಆಸ್ತಿ ವಿಚಾರಕ್ಕೆ ಕುಟುಂಬ ಕಲಹ ➤ ಅಣ್ಣನಿಗೆ ತಲವಾರು ಬೀಸಿದ ತಮ್ಮ

(ನ್ಯೂಸ್ ಕಡಬ) newskadaba.com ಕಡಬ, ಆ.28. ಆಸ್ತಿ ವಿಚಾರಕ್ಕೆ ಸಂಬಂಧಿಸಿ ಸ್ವಂತ ಅಣ್ಣ‌ನಿಗೆ ತಮ್ಮನೋರ್ವ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೆಂಜಿಲಾಡಿ ಗ್ರಾಮದ ಪದಕ ನಿವಾಸಿ ಶೇಷಪ್ಪ ಗೌಡ ಎಂಬವರ ಪುತ್ರ ಲಕ್ಷ್ಮಣ ಗೌಡ(55) ಎಂಬವರಿಗೆ ತಮ್ಮನಾದ ಪ್ರಭಾಕರ ಗೌಡ ಎಂಬವರು ತಲವಾರಿನಿಂದ ಹಲ್ಲೆಗೊಳಿಸಿದ್ದು, ಗಾಯಗೊಂಡ ಲಕ್ಷ್ಮಣ ಗೌಡರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪ್ರಭಾಕರ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಸ್ತಿ ವಿಚಾರದಲ್ಲಿ ಸಹೋದರರ ಮಧ್ಯೆ ಆಗಾಗ ಜಗಳ ನಡೆಯುತ್ತಿದ್ದು ಈ ಸಂಬಂಧ ಆರೋಪಿ ಪ್ರಭಾಕರ ಇರುವ ಮನೆಗೆ ಶುಕ್ರವಾರ ರಾತ್ರಿ ಸಹೋದರರಾದ ಲಕ್ಷ್ಮಣ ಗೌಡ ಹಾಗೂ ಭಾಸ್ಕರ ಗೌಡ ಬಂದಿದ್ದು, ಈ ವೇಳೆ ಪ್ರಭಾಕರ ತಲವಾರಿನಿಂದ ತನ್ನ ಸಹೋದರ ಭಾಸ್ಕರ ಎಂಬವರಿಗೆ ಕಡಿಯಲು ಯತ್ನಿಸಿದ ವೇಳೆ ತಡೆಯಲು ಬಂದ ಲಕ್ಷ್ಮಣ ಗೌಡರಿಗೆ ಗಾಯವಾಗಿದೆ.

Also Read  ಬೀಡಿ ಬ್ರಾಂಚ್ ನಿಂದ ಬೀಡಿ, ತಂಬಾಕು ಕಳವು ಪ್ರಕರಣ ➤ ಆರೋಪಿ ಅಂದರ್..!!

 

 

 

 

error: Content is protected !!
Scroll to Top