24 ಗಂಟೆಗಳಲ್ಲಿ 134 ಕಿಮೀ ಮ್ಯಾರಥಾನ್ ಓಡಿದ ಕಡಬದ ಹರೀಶ್ ಕರ್ಕೇರ ➤ ದೆಹಲಿಯಲ್ಲಿ ನಡೆಯಲಿರುವ 36 ಗಂಟೆಗಳ ಓಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ.24. ಏಜೀಸ್ ಫೆಡರಲ್ ಲೈಫ್ ಇನ್ಸೂರೆನ್ಸ್ ವತಿಯಿಂದ ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 24 ಗಂಟೆಗಳ ಸ್ಟೇಡಿಯಂ ಓಟವನ್ನು ಪೂರ್ತಿಗೊಳಿಸಿ ಕಡಬದ ಹರೀಶ್ ಕರ್ಕೇರ ಅವರು ನವದೆಹಲಿಯಲ್ಲಿ ನಡೆಯಲಿರುವ 36 ಗಂಟೆಗಳ ಮ್ಯಾರಥಾನ್ ಓಟಕ್ಕೆ ಆಯ್ಕೆಯಾಗಿದ್ದಾರೆ.

ಕಡಬ ತಾಲೂಕಿನ ಕಡ್ಯ ಕೊಣಾಜೆ ಗ್ರಾಮದ ಮುಚ್ಚಿರೋಡಿ ನಿವಾಸಿ ದೇವಪ್ಪ ಪೂಜಾರಿ – ಮೋಹಿನಿ ದಂಪತಿಯ ಪುತ್ರನಾಗಿರುವ ಹರೀಶ್ ಕರ್ಕೇರ ಅವರು 24 ಗಂಟೆಗಳಲ್ಲಿ 134 ಕಿಲೋಮೀಟರ್ ಓಟವನ್ನು ಪೂರ್ಣಗೊಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಬೆಂಗಳೂರಿನ ಟೈಟಾನ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಕಂಪೆನಿಯ ಪ್ರಾಯೋಜಕತ್ವದಲ್ಲಿ ಉತ್ತಮ ಸಾಧನೆಗೈದಿದ್ದಾರೆ.

Also Read  ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ- ವಾರಸುದಾರರು ಸಂಪರ್ಕಿಸುವಂತೆ ಮನವಿ

 

 

 

error: Content is protected !!
Scroll to Top