(ನ್ಯೂಸ್ ಕಡಬ) newskadaba.com ಕಡಬ, ಜೂ.10. ಮಂಗಳೂರು ವಿಶ್ವವಿದ್ಯಾಲಯದಿಂದ ಅನುಮತಿ ಪಡೆದ ಕಡಬದ ಏಮ್ಸ್ ಕಾಲೇಜು ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಿದೆ. ಹೀಗಾಗಿ ಹಲವಾರು ಪ್ರಶಸ್ತಿಗಳು ಲಭಿಸಿದೆ. ಪ್ರಸಕ್ತ ಸಾಲಿನಲ್ಲಿ 100 ವಿದ್ಯಾರ್ಥಿಗಳಿಗೆ ಶುಲ್ಕ ಉಚಿವಾಗಿ ಶಿಕ್ಷಣ ನೀಡಲಾಗುವದು ಎಂದು ಸಂಸ್ಥೆಯ ಅಧ್ಯಕ್ಷೆ ಪೌಝೀಯ ಬಿ.ಎಸ್.ಹೇಳಿದರು.
ಅವರು ಕಡಬದ ಪ್ರೆಸ್ ಕ್ಲಬ್ ನಲ್ಲಿ ಇತ್ತೀಚೆಗೆ ಪತ್ರೀಕಾಗೋಷ್ಟಿಯಲ್ಲಿ ಮಾತನಾಡಿ, ಸಂಸ್ಥೆಯು 2012-13 ಸಾಲಿನಲ್ಲಿ 7 ವಿದ್ಯಾರ್ಥಿಗಳ ಮೂಲಕ ಆರಂಭಗೊಂಡು ಬಳಿಕದ ಬೆಳವಣಿಗೆಯಲ್ಲಿ 2015-16 ನೇ ಸಾಲಿನಲ್ಲಿ ಕಾಲೇಜಿನ ಪ್ರಥಮ ಬ್ಯಾಚಿನ ಬಿ ಎ, ಬಿಕಾಂ ತರಗತಿಗಳಲ್ಲಿ ಶೇ. 100 ಫಲಿತಾಂಶ ಹಾಗೂ ಮೂವರು ವಿದ್ಯಾರ್ಥಿಗಳು ಉನ್ನತ ಶೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎನ್ನೆಸೆಸ್ಸ್ ಘಟಕವನ್ನು ಕಾಲೇಜಿನಲ್ಲಿ ಸ್ಥಾಪಿಸಲು ನಿಗದಿತ ಅವಧಿಯ ನಿಯಮವಿದೆ. ಆದರೂ ಕಾಲೇಜಿನ ಉತ್ತಮ ಬೆಳವಣಿಗೆಯಿಂದ ಅವಧಿ ಪುರ್ಣವಾಗುವುದೊರಳಗಡೆ ಕಾಲೇಜಿನಲ್ಲಿ ಘಟಕ ಸ್ಥಾಪಿಸಲು ಅನುಮತಿ ಸಿಕ್ಕಿದೆ. ಸಂಸ್ಥೆಯ ಸಾಧನೆಗಳನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳಿಂದ ಸುಮಾರು 15 ಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿದೆ. 2015-16 ಸಾಲಿನಲ್ಲಿ ಕಾಲೇಜು ಕರ್ನಾಟಕ ಬ್ಯಾರಿ ಸಾಹಿತ್ಯ ಫೆಲೋಶಿಪ್ ಪ್ರಶಸ್ತಿಗೂ ಭಾಜನವಾಗಿದೆ. ಕಾಲೇಜು ಆರಂಭವಾಗಿ 5 ವರ್ಷ ಸಂದ ಪ್ರಸ್ತುತ ವರ್ಷದಲ್ಲಿ 50 ಕಲಾ ಹಾಗೂ 50 ವಾಣಿಜ್ಯ ವಿದ್ಯಾರ್ಥಿಗಳಿಗೆ ಯಾವೂದೆ ಮಾನದಂಡವನ್ನು ಹೇರದೆ ಶುಲ್ಕ ರಹಿತವಾಗಿ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ. ಕಾಲೇಜಿನಲ್ಲಿ ದ್ವಿತೀಯ ಪಿಯುಸಿ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕೋಚಿಂಗ್ ತರಗತಿಗಳು ನಡೆಯುತ್ತಿದೆ. ಈಗಾಗಲೇ ಒಟ್ಟು 190 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸಲಾಗುವುದು. ಕಾಲೇಜಿನ ವತಿಯಿಂದ ಊರ ಪರವೂರ ವಿದ್ಯಾರ್ಥಿಗಳಿಗೆ ಬಸ್ಸು ಸೌಲಭ್ಯವನ್ನು ಒದಗಿಸಲಾಗುವುದು ಎಂದು ಪೌಝೀಯ ಹೇಳಿದರು.
ಪತ್ರೀಕಾಗೋಷ್ಟಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಬಡಿಲ ಹುಸೈನ್, ಗೌರವ ಸಲಹೆಗಾರ ಹಾಜಿ ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಸಮಿರಾ ಕೆ.ಎ., ಉಪಾಧ್ಯಕ್ಷ ವಸಂತ ಕುಮಾರ್ ಎಚ್. ಉಪಸ್ಥಿತರಿದ್ದರು.