ಕೊಕ್ಕಡ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.15. ಕೊಕ್ಕಡ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಜಮಾಅತ್ ಅಧ್ಯಕ್ಷರಾದ ಮುಸ್ತಾಫಾ ಮಲ್ಲಿಗೆ ಮಜಲು ಧ್ವಜಾರೋಹಣೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕುವ್ವತುಲ್ ಇಸ್ಲಾಮ್ ಮದ್ರಸ ಕೊಕ್ಕಡ ಇದರ ಮುಖ್ಯ ಅಧ್ಯಾಪಕರಾದ ಜುನೈದ್ ಉಸ್ತಾದರು ಸ್ವಾಗತ ನಡೆಸಿ, ಖತೀಬ್ ಉಸ್ತಾದರಾದ ಇಬ್ರಾಹಿಂ ದಾರಿಮಿ
ದುಆ ನೇತೃತ್ವ ವಹಿಸಿ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.
ಆಗಸ್ಟ್ 15 ರ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಜಮಾಆತ್ ಕಾರ್ಯದರ್ಶಿ ರಶೀದ್ MAR, ಯಂಗ್ ಮೆನ್ಸ್ ಅಧ್ಯಕ್ಷ ಮಹಮ್ಮದ್ ಅಲೀ ಮತ್ತು ಹಲವಾರು ಗಣ್ಯರು, ವಿದ್ಯಾರ್ಥಿಗಳು, ಮೊದಲಾದವರು ಭಾಗವಹಿಸಿದ್ದರು. ಮುಅಲ್ಲಿಮ್ ಆದಂ ಉಸ್ತಾದ್ ವಂದಿಸಿದರು.

Also Read  ಸಾರ್ವಜನಿಕರಿಗೆ ತೊಂದರೆಯಾಗದೇ ಮರಳು ಪೂರೈಕೆಯಾಗಲಿ- ಸಚಿವರ ಸೂಚನೆ

 

 

 

error: Content is protected !!
Scroll to Top