ಮನ್‌ಶರ್ ವಿದ್ಯಾಸಂಸ್ಥೆಯಲ್ಲಿ ಸರಳ ರೀತಿಯ ಸ್ವಾತಂತ್ರ್ಯೋತ್ಸವ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಆ.15. ಬಹುಮಾನ್ಯ ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ರವರ ಸಾರಥ್ಯದ ಮನ್‌ಶರ್ ಸಂಸ್ಥೆಯಲ್ಲಿ ಭವ್ಯ ಭಾರತದ 75 ನೇ ಸ್ವಾತಂತ್ರ್ಯೋತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ಸಂಸ್ಥೆಯ ಟ್ರಸ್ಟಿ ಪಿ.ಬಿ.ಅಬ್ದುಲ್ ಖಾದರ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಬಹು:ಅಬ್ದುಲ್ ಕರೀಂ ಲತೀಫಿ ಉಸ್ತಾದರು ದುವಾಶೀರ್ವಚನಗೈದರು. ಮಂಬಉಲ್ ಉಲೂಂ ಅರಬಿಕ್ ಮದ್ರಸದ ಮುಖ್ಯೋಪಾಧ್ಯಾಯ ಅಬ್ದುಲ್ ಅಝೀಝ್ ಮದನಿ, ಅಡ್ಮಿನಿಸ್ಟ್ರೇಟಿವ್ ಆಫೀಸರ್ ರಶೀದ್ ಕುಪ್ಪೆಟ್ಟಿ, ಅಕೌಂಟೆಂಟ್ ಆಫೀಸರ್ ಆಶಿಕ್ ಉಜಿರೆ, ಪ್ಯಾರಾ ಮೆಡಿಕಲ್ ಉಪ ಪ್ರಾಂಶುಪಾಲೆ ಶ್ರೀಮತಿ ಸುಪ್ರಿತಾ, ಸೈಫುಲ್ಲಾ HS, ಫಯಾಝ್ ಗೇರುಕಟ್ಟೆ, ಸಿದ್ದೀಖ್ ಪರಪ್ಪು, ಬಶೀರ್ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

Also Read  ಚಲಿಸುತ್ತಿದ್ದ ಜೀಪ್‌ ಗೆ ಬೆಂಕಿ ಅವಘಡ

ಸಂಸ್ಥೆಯ ಚಯರ್ಮಾನ್ ನಾಡಿನ ಸಮಸ್ತ ಜನತೆಗೂ 75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಹಾರೈಸಿದರು. ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ಧಾಳ ಸ್ವಾಗತಿಸಿ, ವಂದಿಸಿದರು.

 

 

 

 

error: Content is protected !!
Scroll to Top