(ನ್ಯೂಸ್ ಕಡಬ) Newskadaba.com ಕೊಣಾಜೆ, ಆ. 15. ದ.ಕ.ಜಿ.ಪಂ.ಉ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆಯಲ್ಲಿ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಕೊಣಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ರುಕ್ಮಿಣಿ ಧ್ವಜಾರೋಹಣ ನೇರವೇರಿಸಿದರು. ಕೊಣಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಶಿವಪ್ಪ ಗೌಡ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ನವೀನ ಮನೆ ಜಾಲ್, ಪಿಡಿಒ ಪದ್ಮನಾಭ ಪಿ, ಸಿ.ಎ. ಬ್ಯಾಂಕ್ ನಿರ್ದೇಶಕರಾದ ರಘುಚಂದ್ರ ಮನೆ ಜಾಲ್, ಊರಿನ ಪ್ರಮುಖರಾದ ವಿಠಲ್ ಭಟ್ ಕಡ್ಯ, ಸುಂದರಗೌಡ ದೊಡ್ಡಮನೆ, ಎಸ್ಡಿಎಂಸಿ ಸದಸ್ಯರಾದ ಕೃಷ್ಣಪ್ಪ ಕೆ, ರಾಮಣ್ಣ ಆಚಾರಿ, ಪಂಚಾಯತ್ ಸಿಬ್ಬಂದಿಗಳಾದ ಸತೀಶ್, ಪುನೀತ್ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ರಾಮಕೃಷ್ಣ ಕೆ ಸ್ವಾಗತಿಸಿ ವಂದಿಸಿದರು. ಶಿಕ್ಷಕಿ ಸುಮಾ ನಿರ್ವಹಣೆ ಮಾಡಿದರು. ಶಿಕ್ಷಕರಾದ ಅಜಿತ್ ಜೈನ್, ಹಾಲೇಶ್, ಗೌರವ ಶಿಕ್ಷಕಿ ನಾಗವೇಣಿ ಸಹರಿಸಿದರು.