ಕಡಬ: ಬಾಲಕಿಯ ಅತ್ಯಾಚಾರ ಯತ್ನ ಪ್ರಕರಣ ಪೂರ್ವಯೋಜಿತ ➤ ವಾಡ್ಯಪ್ಪ ಗೌಡ ಎರ್ಮಾಯಿಲ್ ಆರೋಪ

ಕಡಬ, ಆ.14. ಬಿಳಿನೆಲೆ ಕಿದು ಸಮೀಪದ ಹಾಲುಮಡ್ಡಿಯ ತೋಟದಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಹಾಗೂ ಕಿಡ್ನಾಪ್‌ಗೆ ಯತ್ನ ಮಾಡಿರುವ ಪ್ರಕರಣವು ಪೂರ್ವ ಯೋಜಿತವಾಗಿದ್ದು, ಪೊಲೀಸರು ಕೂಡಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಆರೋಪಿಯನ್ನು ರಕ್ಷಿಸುವ ಯತ್ನ ನಡೆಸಿದ್ದರು ಎಂದು ಬಿಳಿನೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಆರೋಪಿಸಿದ್ದಾರೆ.

ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರಕರಣದ ಆರೋಪಿಯ ಬಗ್ಗೆ ಸ್ಪಷ್ಟ ಮಾಹಿತಿಯಿದ್ದರೂ ಪೊಲೀಸರು ಪ್ರಕರಣ ದಾಖಲಿಸಲು ಮೀನಾಮೇಷ ನಡೆಸಿ ಊರವರು ಒತ್ತಡ ಹಾಕಿದ ಬಳಿಕವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಿದರು. ಬಾಲಕಿ ಶಾಲೆಯಿಂದ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿಯು ಸಮಯ ಸಾಧಿಸಿ ಹೊಂಚು ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೂ ಮುನ್ನ ಅಂಗಡಿಯೊಂದರಿಂದ ಗ್ಲೌಸ್ ಖರೀದಿಸಿ, ಮುಖಕ್ಕೆ ಮುಖ ಕವಚ ಹಾಕಿಕೊಂಡು, ರೈನ್ ಕೋಟ್ ಧರಿಸಿ ಯಾರಿಗೂ ಗುರುತು ಸಿಗದಂತೆ ಅತ್ಯಾಚಾರ ನಡೆಸಿ ಬಾಲಕಿಯನ್ನು ಕೊಂದು ಹಾಕಲು ಯತ್ನಿಸಿದ್ದ. ಆದರೆ ಬಾಲಕಿ ಆರೋಪಿಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾಳೆ. ಈ ಅತ್ಯಾಚಾರ ಕೃತ್ಯವು ಕಿದು ಹಾಲುಮಡ್ಡಿ ಕಾರ್ಮಿಕನಿಂದ ನಡೆದಿದ್ದು, ಆತನನ್ನು ರಕ್ಷಣೆ ಮಾಡುವ ಉದ್ದೇಶದಿಂದ ಪ್ರಕರಣ ದಾಖಲಿಸಲು ಸಮಯ ತೆಗೆದುಕೊಳ್ಳಲಾಗಿದೆ ಎಂದವರು ಆರೋಪಿಸಿದ್ದಾರೆ.

Also Read  ಸುಳ್ಯದಲ್ಲಿ ಮತ್ತೆ ಭೂಕಂಪನ ➤ ಮನೆಗಳಿಗೆ ಹಾನಿ

ಊರಿನವರ ಮಾತಿಗೆ ಬೆಲೆ ನೀಡದ ಎಸ್.ಐ, ಅವರು ಹಾಲು ಮಡ್ಡಿ ಗುತ್ತಿಗೆ ಪಡೆದುಕೊಂಡವನ ಮಾತಿಗೆ ಬೆಲೆ ನೀಡಿದ್ದಾರೆ. ಇಲ್ಲಿ ಕಾರ್ಮಿಕರಾಗಿರುವವರು ದೂರದ ಊರಿಂದ ಬಂದಿರುವ ಅಪರಿಚಿತರಾಗಿದ್ದಾರೆ. ಇಂತಹವರಿಂದಲೇ ಈ ಹೀನ ಕೃತ್ಯ ನಡೆದಿದೆ. ಆದ್ದರಿಂದ ಆರೋಪಿಯ ಒಡೆತನದ ಗುತ್ತಿಗೆಯನ್ನು ರದ್ದು ಪಡಿಸಿ ಊರಿನ ಜನರಿಗೆ ಕೆಲಸ ನೀಡಬೇಕು, ಈ ಬಗ್ಗೆ ಅರಣ್ಯಾಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಇಲ್ಲದಿದ್ದಲ್ಲಿ ಮುಂದೆ ಕೂಡಾ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದ್ದು, ಅಮಾಯಕ ಹೆಣ್ಣು ಮಕ್ಕಳು ದಾರಿಯಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ಮುಂದುವರಿಯಲಿದೆ. ಹಾಲುಮಡ್ಡಿ ಕೆಲಸಕ್ಕೆ ಪರವೂರಿನವರನ್ನು ಸೇರಿಸಿಕೊಂಡರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ವಾಡ್ಯಪ್ಪ ಗೌಡ ಎಚ್ಚರಿಕೆ ನೀಡಿ ಸುಬ್ರಹ್ಮಣ್ಯದಲ್ಲಿ ಶಿಕ್ಷಕನೊಬ್ಬ ಮಾಡಿರುವ ಗಣಂಧಾರಿ ಕಾರ್ಯ ಖಂಡನೀಯವಾಗಿದ್ದು, ಪ್ರಜ್ಞಾವಂತ ಸಮಾಜ ತಲೆತಗ್ಗಿಸುವಂತದ್ದು ಎಂದರು.

Also Read  ಎಸ್ಕೆಎಸ್ಸೆಸ್ಸೆಫ್‌ ಸುಳ್ಯ ವಲಯದ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ಹಸನ್ ಅರ್ಶದಿ ಬೆಳ್ಳಾರೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಖ್ ಅಡ್ಕ ಆಯ್ಕೆ

ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸರೋಜಿನಿ ಜಯಪ್ರಕಾಶ್ ಮಾತನಾಡಿ ಬಿಳಿನೆಲೆ ಪರಿಸರದಲ್ಲಿ ಇಂತಹ ಘಟನೆ ಈವರೆಗೆ ನಡೆದಿಲ್ಲ. ಅತ್ಯಾಚಾರ ಹಾಗೂ ಕಿಡ್ನಾಪ್ ಪ್ರಕರಣ ಈ ಭಾಗದ ಮಹಿಳೆಯರಲ್ಲಿ ಹಾಗೂ ವಿದ್ಯಾರ್ಥಿನಿಯರಲ್ಲಿ ಭಯದ ವಾತಾವರಣವನ್ನು ಸೃಷ್ಠಿಸಿದೆ. ಪೋಲಿಸರು ನಮಗೆ ಮಾನಸಿಕ ಧೈರ್ಯ ತುಂಬುವ ಬದಲು ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಎರ್ಕ, ಬಿಳಿನೆಲೆ ಗ್ರಾಮ ಪಂ.ಸದಸ್ಯೆ ಶಾರದಾ ಲಕ್ಷ್ಮಣ ಆಚಾರಿ, ಬಿಳಿನೆಲೆ ಸಿ.ಎ ಬ್ಯಾಂಕ್ ನಿರ್ದೇಶಕಿ ಉಮಾವತಿ ಕಳಿಗೆ, ಪ್ರಮುಖರಾದ ಶೀನಪ್ಪ ಗೌಡ, ಚಿತ್ರಾವತಿ, ಚಂದ್ರಶೇಖರ ಸಣ್ಣಾರ ಮತ್ತಿತರರು ಉಪಸ್ಥಿತರಿದ್ದರು.

 

 

 

error: Content is protected !!
Scroll to Top