ಪ್ಲಾಸ್ಟಿಕ್ ಕಪ್, ಪ್ಲೇಟ್ ಉತ್ಪಾದನೆ ಸ್ಥಗಿತಕ್ಕೆ ಕೇಂದ್ರ ಸರಕಾರ ನಿರ್ಧಾರ ➤ ಪರಿಸರ ಮಾಲಿನ್ಯ ತಡೆಗೆ ಮಹತ್ವದ ತೀರ್ಮಾನ

(ನ್ಯೂಸ್ ಕಡಬ) newskadaba.com ನವದೆಹಲಿ, ಆ.14. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಒಂದು ಸಲ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್​ ಕಪ್​, ಪ್ಲೇಟ್​ ಹಾಗೂ ಸ್ಟ್ರಾಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಕೇಂದ್ರ ಸರ್ಕಾರವು ಘೋಷಿಸಿದೆ.

ಒಮ್ಮೆ ಮಾತ್ರ ಬಳಸಿ ಬಿಸಾಡುವಂತಹ ಪ್ಲಾಸ್ಟಿಕ್​ ಉತ್ಪನ್ನಗಳಾದ ಸ್ಟ್ರಾ, ಕಪ್, ಪ್ಲೇಟ್​, ಟ್ರೇ, ಪಾಲಿಸ್ಟಿರೀನ್​ ಮುಂತಾದವುಗಳ ಉತ್ಪಾದನೆಯನ್ನು ಏಕಬಳಕೆ ಉತ್ಪನ್ನ ಎಂದು ಪರಿಗಣಿಸಲಾಗಿದ್ದು, 2022ರ ಜುಲೈ 1ರಿಂದ ಈ ವಸ್ತುಗಳ ಉತ್ಪಾದನೆ ಸ್ಥಗಿತಗೊಳ್ಳಲಿದೆ. ಇನ್ನು ಪ್ಲಾಸ್ಟಿಕ್ ಕವರ್ (ಪಾಲಿಥೀನ್​ ಬ್ಯಾಗ್​) ದಪ್ಪವನ್ನು ಕೂಡ ಹೆಚ್ಚಿಸಲು ಸರ್ಕಾರ ನಿರ್ಧರಿಸಿದ್ದು, ಎರಡು ಹಂತಗಳಲ್ಲಿ ಜಾರಿಗೆ ತರುವುದಾಗಿ ಹೇಳಿದೆ.

Also Read  ತಿರುಮಲದಲ್ಲಿ ವಸತಿ ಕೊಠಡಿಗಳ ಬಾಡಿಗೆ ದರ ಭಾರಿ ಹೆಚ್ಚಳ...!!!

 

 

 

error: Content is protected !!
Scroll to Top