ಡಿಸಿಸಿ ಬ್ಯಾಂಕ್ ಮತ್ತು ಬಿಳಿನೆಲೆ ಪಂಚಾಯತ್ ವತಿಯಿಂದ ಹಣಕಾಸು ಮಾಹಿತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಕಡಬ, ಆ.13. ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಅವರ ಕನಸಿನಂತೆ ಗ್ರಾಮೀಣ ಪ್ರದೇಶದವರಿಗೆ ಬ್ಯಾಂಕ್ ನಲ್ಲಿ ಸಿಗುವ ಸಾಲ ಸೌಲಭ್ಯ, 94C ಗೆ ಡಿಸಿಸಿ ಬ್ಯಾಂಕ್ ನಿಂದ ಸಿಗುವ ಹಣಕಾಸು ಮಾಹಿತಿ ಕಾರ್ಯಕ್ರಮವು ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಶಂಕರ್ ಬಿಳಿನೆಲೆಯವರ ಮನವಿಯ ಮೇರೆಗೆ ಡಿಸಿಸಿ ಬ್ಯಾಂಕ್ ನ ಸುಬ್ರಹ್ಮಣ್ಯ ಶಾಖೆಯ ಸಹಯೋಗದೊಂದಿಗೆ ಬಿಳಿನೆಲೆ ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ನಡೆಯಿತು.

ಬಿಳಿನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಶಂಕರ್ ಬಿಳಿನೆಲೆಯವರು ಕಾರ್ಯಕ್ರಮದ ದೀಪಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಬಿಳಿನೆಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶಾರದಾ ದಿನೇಶ್ ಗೌಡ, ಡಿಸಿಸಿ ಬ್ಯಾಂಕ್ ನ ಶಾಖಾಧಿಕಾರಿ ಚಂದ್ರಪ್ರಕಾಶ್, ಸಂತೋಷ್, ಬಿಳಿನೆಲೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಸತೀಷ್ ಕಳಿಗೆ, ಬೇಬಿ ಉಮೇಶ್, ಚಂದ್ರಾವತಿ, ಭವ್ಯ ಕುಕ್ಕಾಜೆ, ಮುರಳಿ ಎರ್ಮಾಯಿಲ್ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Also Read  ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ವರ್ಗಾವಣೆ ► ನೂತನ ಕಮಿಷನರ್ ಆಗಿ ವಿಪುಲ್ ಕುಮಾರ್ ನೇಮಕ

 

 

 

error: Content is protected !!
Scroll to Top