Big Shocking News ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ಆರಂಭ..? ➤ 5 ದಿನಗಳಲ್ಲಿ 242 ಮಕ್ಕಳಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.12. ರಾಜ್ಯದಲ್ಲಿ ಕಳೆದ ಐದು ದಿನಗಳಲ್ಲಿ ಕನಿಷ್ಠ 242 ಮಕ್ಕಳು ಕೊರೊನಾವೈರಸ್ ಸೋಂಕಿಗೆ ಒಳಗಾಗಿದ್ದು, ಕೊರೋನಾ ಮೂರನೇ ಅಲೆ ಆರಂಭವಾಗಿದೆಯಾ ಎನ್ನುವ ಅನುಮಾನ ಮೂಡಿಬಂದಿದೆ.

ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ 5 ದಿನಗಳಲ್ಲಿ 19 ವರ್ಷಕ್ಕಿಂತ ಕಡಿಮೆ ವಯಸ್ಸಿನ 242 ಮಂದಿಯಲ್ಲಿ ಕೊರೋನಾ ದೃಢಪಟ್ಟಿದ್ದು, ಇದರಲ್ಲಿ 9 ವರ್ಷಕ್ಕಿಂತ ಕಡಿಮೆ ವಯಸ್ಸಿನ 106 ಮಕ್ಕಳು ಹಾಗೂ 9 ರಿಂದ 19 ವರ್ಷದ ಒಳಗಿನ 136 ಮಂದಿ ಸೇರಿದ್ದಾರೆ. ಈ ಹಿಂದೆಯೇ ಕೊರೋನಾ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಸಿದ್ದು, ಈಗಿನ ಕೊರೋನಾ ಹೆಚ್ಚಳವು ತಜ್ಞರ ವರದಿಗೆ ಪುಷ್ಟಿ ನೀಡಿದೆ.

Also Read  ಅನ್ನ ಮಾಡಿಲ್ಲವೆನ್ನುವ ಕೋಪದಲ್ಲಿ ಪತ್ನಿಯನ್ನೇ ಹತ್ಯೆ ಮಾಡಿದ ಪತಿ

 

 

 

error: Content is protected !!
Scroll to Top