ಸ್ವಂತ ಚಿಕ್ಕಪ್ಪನಿಂದಲೇ ಅಪ್ರಾಪ್ತ ಬಾಲಕಿಯ‌ ಅತ್ಯಾಚಾರ ಯತ್ನ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಆ.12. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಆಕೆಯ ಚಿಕ್ಕಪ್ಪನೇ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮೂಡಬಿದಿರೆಯಿಂದ ವರದಿಯಾಗಿದೆ.

ತೆಂಕಮಿಜಾರು ವ್ಯಾಪ್ತಿಯ ಪ್ರೌಢಶಾಲಾ ವಿದ್ಯಾರ್ಥಿನಿ, ಅಪ್ರಾಪ್ತೆ ಬಾಲಕಿಯು ಸೋಮವಾರದಂದು ತನ್ನ ಮನೆಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಆಕೆಯ ಚಿಕ್ಕಪ್ಪ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ನೀಡಿದ ದೂರಿನ ಮೇರೆಗೆ ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

 

 

error: Content is protected !!
Scroll to Top