ರಾಜ್ಯ ಮಾನವ ಹಕ್ಕು ಆಯೋಗದಲ್ಲಿ ವಿವಿಧ ಹುದ್ದೆಗಳು ➤ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.10. ರಾಜ್ಯ ಮಾನವ ಹಕ್ಕುಗಳ ಆಯೋಗವು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ರಾಜ್ಯ ಮಾನವ ಹಕ್ಕುಗಳ ಆಯೋಗ ಗುತ್ತಿಗೆ ಆಧಾರದ ಮೇಲೆ ಹಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಈ ನೇಮಕಾತಿಯು 6 ತಿಂಗಳ ಅವಧಿ ಅಥವಾ ನೇಮಕಾತಿಯಾದವರ ಸೇವೆಯು ತೃಪ್ತಿಕರವೆಂದು ಕಂಡುಬಂದಲ್ಲಿ ಪುನಃ ಮುಂದುವರೆಸುವುದು ಆಯೋಗದ ವಿವೇಚನೆಗೆ ಒಳಪಟ್ಟಿರುತ್ತದೆ. ಈಗಾಗಲೇ ಆಯೋಗಕ್ಕೆ ಯಾವುದೇ ಹುದ್ದೆಗಾಗಿ ನೇರವಾಗಿ ಅರ್ಜಿ ಸಲ್ಲಿಸಿದ್ದರೆ ಈ ಪ್ರಕಟಣೆಯನ್ನು ಉಲ್ಲೇಖಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು. ಅವರು ಈಗಾಗಲೇ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ.

  • ಹುದ್ದೆಗಳ ವಿವರ; ಕೋರ್ಟ್ ಅಧಿಕಾರಿ (1) ಮಾಸಿಕ ವೇತನ 43,100 ರೂ.ಗಳು.
  • ತೀರ್ಪು ಬರಹಗಾರರು (1) ಮಾಸಿಕ ವೇತನ 37,900.
  • ಕಾನೂನು ಸಹಾಯಕರು/ ಸಂಶೋಧನಾ ಸಹಾಯಕರು (2) ಮಾಸಿಕ ವೇತನ 33,450 ರೂ.ಗಳು.
  • ಶೀಘ್ರಲಿಪಿಕಾರರು (2) ಮಾಸಿಕ ವೇತನ 27,650 ರೂ.ಗಳು.
  • ಸಹಾಯಕರು (1) ಮಾಸಿಕ ವೇತನ 30,350 ರೂ.ಗಳು.
  • ವಾಹನ ಚಾಲಕರು (1) ಮಾಸಿಕ ವೇತನ ರೂ. 21,400 ಆಗಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸರಕಾರದ ವೆಬ್‌ಸೈಟ್ www.kshrc.karnataka.gov.in ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು 4/9/2021ರ ಒಳಗೆ ನಿಗದಿತ ಪ್ರಪತ್ರದಲ್ಲಿ ಮುಚ್ಚಿದ ಲಕೋಟೆಯಲ್ಲಿ ಅಂಚೆ ಮೂಲಕ ಅರ್ಜಿಗಳನ್ನು ಸಲ್ಲಿಸಲಬೇಕು.
ಲಕೋಟೆಯ ಮೇಲೆ ‘ಹುದ್ದೆಗಾಗಿ ಅರ್ಜಿ’ ಎಂದು ಕಡ್ಡಾಯವಾಗಿ ನಮೂದಿಸಿರಬೇಕು.
ಅರ್ಜಿ ಸಲ್ಲಿಕೆ ಮಾಡುವ ವಿಳಾಸ: ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, 5ನೇ ಹಂತ, ಬಹುಮಹಡಿ ಕಟ್ಟಡ, 3ನೇ ಮಹಡಿ, ಬೆಂಗಳೂರು 560001.

ಇ-ಮೇಲ್ ವಿಳಾಸ secretary-kshrc@karnataka.gov.in

 

 

 

 

error: Content is protected !!

Join the Group

Join WhatsApp Group