ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯ ಈ ಬಾರಿಯೂ ಟಾಪ್ ➤ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಬ್ಬರಿಗೆ 625 ರಲ್ಲಿ 625 ಅಂಕ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ.09. ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು 625 ರಲ್ಲಿ 625 ಅಂಕ ಪಡೆಯುವ ಮೂಲಕ ರಾಜ್ಯದಲ್ಲಿ ಟಾಪರ್ ಎನಿಸಿಕೊಂಡಿದ್ದಾರೆ.

ಸುಳ್ಯ ತಾಲೂಕಿನ ಗುತ್ತಿಗಾರು ನಿವಾಸಿ ದುರ್ಗೇಶ್ ಮತ್ತು ವೇದಾವತಿ ದಂಪತಿಗಳ ಪುತ್ರಿ ಅನನ್ಯ ಹಾಗೂ ಸುಬ್ರಹ್ಮಣ್ಯದ ವೆಲೇರಿಯನ್ ಡಿಸೋಜಾ ಮತ್ತು ತೆರೆಸಾ ಡಿಸೋಜಾ ದಂಪತಿಗಳ ಪುತ್ರಿ ವೆನೆಸಾ ಶರಿನಾ ಡಿಸೋಜಾ 625 ಅಂಕ ಪಡೆದ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಗಳಾಗಿದ್ದಾರೆ. ಕಳೆದ ವರ್ಷ ಇದೇ ವಿದ್ಯಾಲಯದ ಅನುಷ್ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಎನಿಸಿಕೊಂಡಿದ್ದರು.

Also Read  “ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ತಳಮಟ್ಟದ ಕೌಶಲ್ಯಅಭಿವೃದ್ಧಿ ಅವಶ್ಯ”– ವೇದವ್ಯಾಸ ಕಾಮತ್ 

 

 

 

error: Content is protected !!
Scroll to Top