ಕೆರೆಗೆ ಬಿದ್ದ ಮಗು ಜೊತೆ ರಕ್ಷಿಸಲು ನೀರಿಗೆ ಹಾರಿದ ತಾಯಿ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಆ.08. ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಗುವನ್ನು ರಕ್ಷಿಸಲು ಕೆರೆಗೆ ಹಾರಿದ ತಾಯಿ ಹಾಗೂ ಮಗು ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಸುಳ್ಯದಲ್ಲಿ ಭಾನುವಾರದಂದು ಸಂಭವಿಸಿದೆ.

ಮೃತರನ್ನು ಸುಳ್ಯ ತಾಲೂಕು ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಲಕಜೆ ನಿವಾಸಿ ಸಂಗೀತಾ(30) ಹಾಗೂ ಆಕೆಯ ಮಗು‌ ಮೂರೂವರೆ ವರ್ಷದ ಅಭಿಮನ್ಯು ಎಂದು ಗುರುತಿಸಲಾಗಿದೆ. ಸಂಗೀತಾರನ್ನು ಮೆಲ್ಕಾರ್ ನಿವಾಸಿ ಅಮಿತ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿದ್ದು, ಕಳೆದೆರಡು ದಿನಗಳ ಹಿಂದಷ್ಟೇ ಪೂಜೆಯ ನಿಮಿತ್ತ ತವರು ಮನೆಗೆ ಬಂದಿದ್ದರು ಎನ್ನಲಾಗಿದೆ. ಭಾನುವಾರದಂದು ತನ್ನ ಸಂಬಂಧಿಕರ ಮನೆಗೆಂದು ತೋಟದ ಮೂಲಕ ತೆರಳುತ್ತಿದ್ದ ವೇಳೆ ಕಾಲು ಜಾರಿ ಮಗು ಕೆರೆಗೆ ಬಿದ್ದಿದ್ದು, ಮಗುವನ್ನು ರಕ್ಷಿಸಲು ಸಂಗೀತಾ ಕೂಡಾ ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ. ಈಜು ಬಾರದ ಹಿನ್ನೆಲೆಯಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ‌. ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ಮುಸುಕುದಾರಿಗಳು - ತಾಯಿ ಮಗಳನ್ನು ಬೆದರಿಸಿ ನಗ-ನಗದು ದರೋಡೆ

 

 

 

 

error: Content is protected !!
Scroll to Top