ತನ್ನ ಅಪ್ರಾಪ್ತೆ ಶಿಷ್ಯೆಯನ್ನೇ ಅತ್ಯಾಚಾರಗೈದ ಕಾಮುಕ ಶಿಕ್ಷಕ ➤ ಪೋಕ್ಸೋ ಕಾಯ್ದೆಯಡಿ ಬಂಧನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ.08. ಅಪ್ರಾಪ್ತ ವಯಸ್ಸಿನ ತನ್ನ ಶಿಷ್ಯೆಯನ್ನೇ ಅತ್ಯಾಚಾರಗೈದ ಕಾಮುಕ ಶಿಕ್ಷಣಕನನ್ನು ಸುಬ್ರಹ್ಮಣ್ಯ ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸುಬ್ರಹ್ಮಣ್ಯದ ಶಿಕ್ಷಣ ಸಂಸ್ಥೆಯೊಂದರ ಪ್ರೌಢಶಾಲಾ ವಿಭಾಗದ ಶಿಕ್ಷಕ, ರಾಯಚೂರು ಮೂಲದ ಗುರುರಾಜ್ ಎಂದು ಗುರುತಿಸಲಾಗಿದೆ. ಆರೋಪಿಯು 2018 ರ ಬಳಿಕ ಹಲವು ಬಾರಿ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಆ ಬಳಿಕ ಫೋಟೋ ತೆಗೆದಿದ್ದಲ್ಲದೆ, ಈ ಬಗ್ಗೆ ಯಾರಲ್ಲಾದರೂ ಹೇಳಿದರೆ ಫೋಟೋ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಬಾಲಕಿಯು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು, ಆರೋಪಿ ಶಿಕ್ಷಕನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

Also Read  ಹೃದಯಾಘಾತ- ಯುವನಟ ವಿಧಿವಶ

 

 

 

 

error: Content is protected !!
Scroll to Top