ಕಡಬದ ಅಡಿಗ ಟಿವಿಎಸ್ ನಲ್ಲಿ ಎನ್-ಟಾರ್ಕ್ ರೇಸ್ XP ಎಡಿಷನ್ ಬಿಡುಗಡೆ ➤ ಅತೀ ಕಡಿಮೆ ಪಾವತಿಸಿ, ಹೊಸ N-Torq ನಿಮ್ಮದಾಗಿಸಿ

ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಟಿವಿಎಸ್ ಮೋಟರ್‌ ಕಂಪನಿಯು ತನ್ನ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಯಾರಿಸಿರುವ ಎನ್‌ಟಾರ್ಕ್ 125 ಮಾದರಿಯ ರೇಸ್ XP ಎಡಿಷನ್ ಕಂಪೆನಿ ಅಧಿಕೃತ ಡೀಲರ್ ಆಗಿರುವ ಕಡಬದ ಅಡಿಗ ಮೊಟಾ‌ರ್ಸ್ ನಲ್ಲಿ ಬಿಡುಗಡೆಗೊಂಡಿದೆ.

ಹೊಸ ಮಾದರಿಯ ವಾಹನವನ್ನು ಸ್ಟಾಂಡರ್ಡ್ ಮಾದರಿಗಿಂತಲೂ ಹೆಚ್ಚು ಗ್ರಾಫಿಕ್ಸ್ ಮತ್ತು ಪವರ್‌ಫುಲ್ ಎಂಜಿನ್ ಟೋನ್‌ನೊಂದಿಗೆ ಸ್ಫೋರ್ಟಿ ಮಾದರಿಯಾಗಿ ತಯಾರಿಸಲಾಗಿದ್ದು , ಹೊಸ ಮಾದರಿಯಲ್ಲಿ ಸ್ಮಾರ್ಟ್ ಕನೆಕ್ಟ್ ಮತ್ತು ವಾಯ್ಸ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ. ಅತ್ಯಾಧುನಿಕ ವಾಹನದಲ್ಲಿ ಕಾರುಗಳಲ್ಲಿರುವಂತ ಸ್ಟಾರ್ಟ್ ಫೀಚರ್ಸ್ ನಲ್ಲಿ ಲೈವ್ ಡ್ಯಾಶ್ಬೋರ್ಡ್ ಮೂಲಕ ರೈಡಿಂಗ್ ಮೋಡ್ ಮಾಹಿತಿ ಸೌಲಭ್ಯ , ಬದಲಾವಣೆ ಮಾಡಲಾದ ಯುಐ ಮತ್ತು ಯುಎಕ್ಸ್ ಅಳವಡಿಸಲಾಗಿದೆ. ನ್ಯಾವಿಗೇಷನ್ ಅಡ್ರೆಸ್ ಮತ್ತು ಸ್ಫೋರ್ಟಿ ಗ್ರಾಫಿಕ್ಸ್ ಆಕರ್ಷಕವಾಗಿದೆ. ರೇಸ್‌ ಎಕ್ಸ್‌ಪಿ ಎಡಿಷನ್‌ನಲ್ಲಿ ಎನ್ ಟಾರ್ಕ್ 125 ಮಾದರಿಯಲ್ಲಿ ಇತರೆ ವೆರಿಯಂಟ್‌ಗಳಲ್ಲಿ ಇರುವಂತೆ 124 ಏರ್ ಕೂಲ್ಡ್ , ಫೈಲ್ ಇಂಜೆಕ್ಷೆಡ್ ಎಂಜಿನ್ ಬಳಕೆ ಮಾಡಿದ್ದು , ಹೊಸ ಆವೃತ್ತಿಯು ಇತರ ಆವೃತ್ತಿಗಿಂತಲೂ ಹೆಚ್ಚು ಹಾರ್ಸ್ ಪವರ್‌ ಹೊಂದಿದೆ. ಸ್ಟ್ಯಾಂಡರ್ಡ್ ಮಾದರಿಗಳು 9.17 -ಬಿಎಚ್‌ಪಿ ಹೊಂದಿದ್ದರೆ ರೇಸ್‌ ಎಕ್ಸ್‌ಪಿ ಮಾದರಿಯು 10 ಬಿಎಚ್‌ಪಿ ಸಾಮರ್ಥ್ಯ ಹೊಂದಿದ್ದು, ಈ ಹಿಂದಿನಂತೆಯೇ 10.5 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎನ್ ಟಾರ್ಕ್ 125 ರೇಸ್‌ ಎಕ್ಸ್‌ಪಿ ಮಾದರಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ರೇಸ್ ಮತ್ತು ಸ್ಟ್ರೀಟ್ ರೈಡ್ ಮೋಡ್ ಗಳನ್ನು ಜೋಡಿಸಿದ್ದು, ರೇಸ್ ಮೋಡ್ ಪರ್ಫಾಮೆನ್ಸ್ ಗಾಗಿ ಮತ್ತು ಸ್ಟ್ರೀಟ್ ಮೋಡ್ ಇಂಧನ ದಕ್ಷತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ . ಜೊತೆಗೆ ಹೊಸ ವೆರಿಯಂಟ್‌ನಲ್ಲಿ ಟಿವಿಎಸ್ ಕಂಪನಿಯು ಉನ್ನತೀಕರಿಸಲಾದ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಿದ್ದು , ಟಿ ಆಕಾರದ ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್‌ಎಸ್‌, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟುಮೆಂಟ್ ಕ್ಲಸ್ಟರ್‌ , ಏಂಜಿನ್ ಕಿಲ್ ಸ್ವಿಚ್, 5.8 ಲೀಟರ್‌ ಇಂಧನ ಟ್ಯಾಂಕ್ ನೀಡಿದೆ. ಈ ಹೊಸ ಮಾದರಿ ದ್ವಿಚಕ್ರ ವಾಹನದ ಪ್ರದರ್ಶನ ಹಾಗೂ ಟೆಸ್ಟ್‌ಡ್ರೈವ್ ಗೆ ಶೋ ರೂಂನಲ್ಲಿ ಲಭ್ಯವಿದೆ . ಹೆಚ್ಚಿನ ಮಾಹಿತಿಗಾಗಿ ಶೋರೂಂ ಅಥವಾ ಮೊಬೈಲ್ 7618766636 ಸಂಪರ್ಕಿಸುವಂತೆ ಶೋರೂಂನ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ಒಂದು ಕಾರಿಗೆ 200ರೂ. ಟೋಲ್ ಕಟ್ ➤ ಚಾಲಕನಿಗೆ‌ ಶಾಕ್

ಹೊಸ ಎನ್ಟಾರ್ಕ್ XP125 ನ್ನು ವಿನಯ್ ಕುಮಾರ್, ಬಿಳಿನೆಲೆ ಪ್ರಥಮ ಗ್ರಾಹಕರಾಗಿ ಪಡೆದುಕೊಂಡರು. ನಂತರ ವಾಹನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿ, ಹೊಸ ಎನ್ಟಾರ್ಕ್ XP125 ಯು ವಾಯ್ಸ್ ಕಮಾಂಡ್ ಫೀಚರ್ ಮತ್ತು ಪವರ್ ಬಗ್ಗೆ ಇಷ್ಟಪಟ್ಟು, ವಾಹನ ಕಂಪನಿ ಬಿಡುಗಡೆ ಗೊಳಿಸಿದ ದಿನದಂದೆ ಶೋ ರೂಮ್ ಹೋಗಿ ಬುಕ್ ಮಾಡಿದ್ದೆ ಎಂದರು.

Also Read  ಕಡಬ ಮತ್ತು ಪುತ್ತೂರು ಉಭಯ ತಾಲೂಕಿನ ಕೊರೋನ ಅಪ್ ಡೇಟ್

error: Content is protected !!
Scroll to Top