ಪುತ್ತೂರು: ಅಕ್ರಮ ಮರದ ದಿಮ್ಮಿ ಸಾಗಾಟ ಪತ್ತೆ ➤ ಲಾರಿ, ಬೈಕ್ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಸ್ವತ್ತು ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.02. ಅಕ್ರಮ ಮರದ ದಿಮ್ಮಿ ಸಾಗಾಟ ಪ್ರಕರಣವೊಂದನ್ನು ಪತ್ತೆ ಹಚ್ಚಿದ ಪುತ್ತೂರು ವಲಯದ ಅರಣ್ಯ ಇಲಾಖೆಯ ಅಧಿಕಾರಿಗಳು 9 ಮರದ ದಿಮ್ಮಿ, ಒಂದು ಲಾರಿ, ಒಂದು ಬೈಕ್ ಸಹಿತ 8 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸೋಮವಾರದಂದು ವಶಪಡಿಸಿಕೊಂಡಿದ್ದಾರೆ.

ಲಾರಿಯೊಂದರಲ್ಲಿ ಕಿರಾಲ್ ಬೋಗಿ ಜಾತಿಗೆ ಸೇರಿದ ಮರದ ದಿಮ್ಮಿಗಳನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಾಟ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ಬೆಂಗಾವಲು ಬೈಕ್ ಸಹಿತ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆಗೆ ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ.

Also Read  ಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಳ ನಿಧನ

ಕಾರ್ಯಾಚರಣೆಯಲ್ಲಿ ಪುತ್ತೂರು ವಲಯದ ಜಾಲ್ಸೂರು ಉಪವಲಯ ಅರಣ್ಯಾಧಿಕಾರಿ ಸಂಜಯ್ ಎಚ್.ನಾಯ್ಕ್, ಕಾಳಭೈರವ ಗಸ್ತು ತಂಡದ ಉಪವಲಯ ಅರಣ್ಯಾಧಿಕಾರಿ ಮೆಹಬೂಬ ಸಾಬ, ಅರಣ್ಯ ರಕ್ಷಕರಾದ ಉದಯ ಕುಮಾರ್, ನಿಂಗರಾಜ ಕಣ್ಣೂರ, ರಾಜುಚಂದ್ರ ಎ.ಪಿ., ಅರಣ್ಯ ವೀಕ್ಷರಾದ ನವೀನ್ ಎಂ. ಮತ್ತು ದೀಪಕ್ ಪಾಲ್ಗೊಂಡಿದ್ದರು.

 

 

 

error: Content is protected !!
Scroll to Top