ಎಂಜಿರ: ಆಕಸ್ಮಿಕವಾಗಿ ನೀರು ಪಾಲಾಗಿದ್ದ ಮಹಿಳೆಯ ಮೃತದೇಹ ಪತ್ತೆ ➤ ಆತ್ಮಹತ್ಯೆ ಶಂಕೆಯೆಂದು ಪ್ರಕಟವಾಗಿದ್ದಕ್ಕೆ ವಿಷಾದ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ.01. ಸೊಪ್ಪು ತರಲೆಂದು ತೆರಳಿದ್ದ ವೇಳೆ ಆಕಸ್ಮಿಕವಾಗಿ ನೀರುಪಾಲಾಗಿದ್ದ ಮಹಿಳೆಯ ಮೃತದೇಹವು ಭಾನುವಾರದಂದು ಗುಂಡ್ಯ ಹೊಳೆಯ ಎಂಜಿರ ಎಂಬಲ್ಲಿ ಪತ್ತೆಯಾಗಿದೆ.

ಕಡಬ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ‌ ಸಮೀಪದ ಉರ್ನಡ್ಕ ನಿವಾಸಿ ಸುಂದರ ಗೌಡ ಎಂಬವರ ಪತ್ನಿ ಶಕುಂತಲಾ(50) ಕಳೆದ ಹಲವು ಸಮಯಗಳಿಂದ ಪಿತ್ತ ಖಾಯಿಲೆಯಿಂದ ಬಳಲುತ್ತಿದ್ದು, ಶನಿವಾರ ಬೆಳಿಗ್ಗೆ ನಾಟಿ ಔಷಧಿ ನೆಲನೆಲ್ಲಿ ಸೊಪ್ಪು ತರಲೆಂದು ಮನೆಯಿಂದ ತೆರಳಿದ್ದವರು ಆಕಸ್ಮಿಕವಾಗಿ ತನ್ನ ಮನೆಯ ಪಕ್ಕದಲ್ಲಿ ಹರಿಯುವ ಗುಂಡ್ಯ ಹೊಳೆಯಲ್ಲಿ ನೀರುಪಾಲಾಗಿದ್ದರು. ಭಾನುವಾರದಂದು ಮಹಿಳೆಯ ಮೃತದೇಹವು ಎಂಜಿರ ಎಂಬಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಕುಂತಲಾ ರವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದರಾದರೂ ‘ನ್ಯೂಸ್ ಕಡಬ’ದಲ್ಲಿ ಆತ್ಮಹತ್ಯೆ ಶಂಕೆ ಎಂದು ಪ್ರಕಟವಾಗಿತ್ತು. ಈ ಬಗ್ಗೆ ನಮ್ಮೆಲ್ಲಾ ಓದುಗರಲ್ಲಿ ವಿಷಾದ ಕೋರುತ್ತೇವೆ.

Also Read  ಸಕಾಲಕ್ಕೆ ಮಳೆ ಬಾರದೆ ಅನೇಕ ಕಡೆಗಳಲ್ಲಿನೀರಿನ ಅಭಾವ➤ಟ್ಯಾಂಕರ್ ಗಳ ಮುಕಾಂತರ ನೀರು ಪೂರೈಕೆ

 

 

 

 

error: Content is protected !!
Scroll to Top