ಕಡಬ ಪರಿಸರದಲ್ಲಿ ಮುಂದುವರಿದ ಹುಚ್ಚುನಾಯಿ ಹಾವಳಿ ➤ ಸ್ಥಳೀಯರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಕಡಬ, ಜು.29. ತಾಲೂಕಿನ ನೂಜಿಬಾಳ್ತಿಲ ವ್ಯಾಪ್ತಿಯಲ್ಲಿ ಹುಚ್ಚುನಾಯಿ ಹಾವಳಿ ಮುಂದುವರಿದಿದ್ದು, ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ಆತಂಕ ಸ್ಥಿತಿಯಲ್ಲಿ ಓಡಾಟ ನಡೆಸುವಂತಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಹುಚ್ಚುನಾಯಿ ರಾದ್ಧಾಂತ ಸೃಷ್ಟಿಸಿ ವ್ಯಕ್ತಿಯೊಬ್ಬರಿಗೆ ಕಚ್ಚಿತ್ತು. ಜೊತೆಗೆ ಸಾಕುನಾಯಿಗಳ ಮೇಲೆ ದಾಳಿ ನಡೆಸಿ ಸಾಯಿಸಿತ್ತು. ಆದರೆ ಇದೀಗ ಬುಧವಾರದಿಂದ ಮತ್ತೆ ಹುಚ್ಚುನಾಯಿ ರಾದ್ಧಾಂತ ಮುಂದುವರಿದಿದೆ. ಎರಡು ಹುಚ್ಚುನಾಯಿಗಳು ಊರಿಡೀ ತಿರುಗಾಡುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ರಾತ್ರಿ ವೇಳೆ ಹಾಗೂ ಹಗಲು ಜನ ವಸತಿ ಸ್ಥಳ, ಕಾಲೋನಿ ಪ್ರದೇಶದಲ್ಲಿ ಓಡಾಟ ನಡೆಸಿ ಆತಂಕ ಸೃಷ್ಟಿಸುತ್ತಿದೆ. ಸಾಕುನಾಯಿಗಳ ಮೇಲೆಯೂ ಹುಚ್ಚುನಾಯಿಗಳ ದಾಳಿ ಮುಂದುವರಿದಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಓಡಾಟ ನಡೆಸುವಂತೆ ಜನರು ಮಾಹಿತಿ ಹಂಚಿಕೊಂಡಿದ್ದಾರೆ. ಸ್ಥಳೀಯಾಡಳಿತ ಹುಚ್ಚುನಾಯಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Also Read  ಮದುವೆ ಕಾರ್ಯಕ್ರಮಗಳು ಅರ್ಧಕ್ಕೆ ನಿಲ್ಲುವುದಕ್ಕೆ ಕಾರಣ ಏನು ಎಂಬುದು ತಿಳಿದಿದೆಯೇ ನಿಮಗೆ ?

 

 

 

 

error: Content is protected !!
Scroll to Top