ನೆಲ್ಯಾಡಿ: ನಿಲ್ಲಿಸಿದ್ದ ಲಾರಿಗಳಿಂದ ಬ್ಯಾಟರಿ ಕಳವು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.27. ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಲಾರಿಗಳಿಂದ ಬ್ಯಾಟರಿಗಳನ್ನು ಕಳವುಗೈದ ಘಟನೆ ನೆಲ್ಯಾಡಿ ಸಮೀಪದ ದೋಂತಿಲದಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ದೋಂತಿಲ ಎಂಬಲ್ಲಿ ಅಬ್ಬಾಸ್ ಹಾಗೂ ಅಶ್ರಫ್ ಎಂಬವರಿಗೆ ಸೇರಿದ ಎರಡು ಲಾರಿಗಳಿಂದ ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಕಳೆದ ಹಲವು ಸಮಯಗಳ ಹಿಂದೆ ನೆಲ್ಯಾಡಿ ಪರಿಸರದಲ್ಲಿ ಬ್ಯಾಟರಿ ಕಳವು ಜಾಲ ಸಕ್ರಿಯವಾಗಿತ್ತು. ತದನಂತರ ಸುಮ್ಮನಿದ್ದ ಕಳ್ಳರು ಇದೀಗ ಮತ್ತೆ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.

Also Read  ಇಂಡಿಯನ್ ಎಕ್ಸಲೆನ್ಸಿ ರಾಷ್ಟ್ರಪ್ರಶಸ್ತಿಗೆ ಕಡಬದ ದಿಲೀಪ್ ಆಯ್ಕೆ

 

 

 

error: Content is protected !!
Scroll to Top