ಸಿಎಂ BSY ರಾಜೀನಾಮೆಗೆ ಇಂದೇ ನಿರ್ಣಾಯಕ..? ➤ ಪದತ್ಯಾಗಕ್ಕೆ ಕೌಂಟ್‌ಡೌನ್ ಸ್ಟಾರ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.25. ಬಿ.ಎಸ್. ಯಡಿಯೂರಪ್ಪರ ಸಿಎಂ ಸ್ಥಾನದ ‘ಪದತ್ಯಾಗ’ಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಇಂದು (ಜು.25) ವರಿಷ್ಠರಿಂದ ಸೂಚನೆ ಬರುವ ನಿರೀಕ್ಷೆ ಇರುವುದಾಗಿ ಸ್ವತಃ ಬಿಎಸ್‌ವೈ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ ಇಂದು ಸಂಜೆ ಹೈಕಮಾಂಡ್ ನಿಂದ ರಾಜೀನಾಮೆ ನೀಡುವಂತೆ ಆದೇಶ ಬರಲಿದ್ದು, ನಾಳೆ (ಜು.26) ಸಂಜೆ ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ನಡುವೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಇಂದು ರವಿವಾರ ಅವರು ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಸಮೀಕ್ಷೆ ಹಮ್ಮಿಕೊಂಡಿದ್ದು, ಇದರಿಂದಾಗಿ ರಾಜೀನಾಮೆ ಪ್ರಕ್ರಿಯೆ ಮುಂದೂಡಿಕೆಯಾಗುವ ಭೀತಿ ಯಡಿಯೂರಪ್ಪ ವಿರೋಧಿ ಪಾಳಯದಲ್ಲಿ ಆತಂಕ ಮೂಡಿಸಿದೆ.

Also Read  ಮಳೆಯ ಆರ್ಭಟಕ್ಕೆ ಕೊಚ್ಚಿಹೋದ ಕೊಂಬಾರು ರಸ್ತೆ ➤ ಕಡಬ ತಹಶೀಲ್ದಾರ್ ಭೇಟಿ

 

 

 

error: Content is protected !!
Scroll to Top