ಹದಿಹರೆಯದ ಬಾಯ್ ಫ್ರೆಂಡ್ಸ್ ಜೊತೆಗೆ 38ರ ಆಂಟಿಯ ಲವ್ವಿಡವ್ವಿ ➤ ಸೋಮಾರಿ ಪತಿ ಮರ್ಡರ್

(ನ್ಯೂಸ್ ಕಡಬ) newskadaba.com ಅಹಮದಾಬಾದ್, ಜು.25. ಪತ್ನಿಯ ದುಡಿಮೆಯಲ್ಲಿ ಜೀವನ‌ ಸಾಗಿಸುತ್ತಿದ್ದ ಸೋಂಬೇರಿ ಗಂಡನನ್ನು 19 ವರ್ಷ ಪ್ರಾಯದ ತನ್ನಿಬ್ಬರು ಬಾಯ್ ಫ್ರೆಂಡ್ಸ್ ಜೊತೆ ಸೇರಿ ಕೊಲೆಗೈದ ಆರೋಪಿಯನ್ನು ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

ಅಹಮದಾಬಾದ್ ನಲ್ಲಿ ಚಿಂದಿ ಆಯುತ್ತಿದ್ದ 35 ವರ್ಷದ ರೇಖಾ ಸೋಲಂಕಿ ಎಂಬಾಕೆಯು ತನ್ನ ಗಂಡ ಜಿಗ್ನೇಶ್ ನನ್ನು ಜುಲೈ 17 ರಂದು ತನ್ನಿಬ್ಬರು ಸ್ನೇಹಿತರ ಸಹಾಯದಿಂದ ಕೊಲೆಗೈದು ಮೃತದೇಹವನ್ನು ವಿಕ್ಟೋರಿಯಾ ಗಾರ್ಡನ್ ಬಳಿ ಎಸೆದಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದಾಗ 19 ವರ್ಷದ ಸಬೀರ್ ಪಠಾಣ್ ಮತ್ತು 23 ವರ್ಷದ ರಾಜು ದಾಮೋರ್ ಜೊತೆಗೆ ಆಕೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಇದೇ ಕಾರಣಕ್ಕಾಗಿ ಗಂಡನನ್ನು ಕೊಲೆಗೈದಿರುವುದಾಗಿ ಶಂಕಿಸಲಾಗಿದೆ.

Also Read  ನಿಯಂತ್ರಣ ತಪ್ಪಿದ ಬೊಲೆರೋ ಢಿಕ್ಕಿ ➤ ಓರ್ವ ಮೃತ್ಯು, ಮೂವರಿಗೆ ಗಾಯ

 

 

 

error: Content is protected !!
Scroll to Top