ಪ್ರಿಯಕರನ ಜೊತೆ ಸೇರಿದ ಗಂಡನನ್ನು ಕೊಂದ ಪಾಪಿ ಪತ್ನಿ ➤ 10 ವರ್ಷಗಳ ನಂತರ ಪೊಲೀಸರ ಬಲೆಗೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು.21. ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಹತ್ಯೆಗೈದ ಆರೋಪಿ 10 ವರ್ಷಗಳ ನಂತರ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

2011ರಲ್ಲಿ ದೆಹಲಿ ಮೂಲದ ಶಕುಂತಲಾ ಎಂಬಾಕೆಯನ್ನು 18 ವರ್ಷ ಪೂರ್ತಿಯಾಗುತ್ತಲೇ ಆಕೆಯ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯ ನಂತರವೂ ತನ್ನ ಹೆಂಡತಿ ಪ್ರಿಯಕರನೊಂದಿಗೆ ಸಂಪರ್ಕದಲ್ಲಿ ಇರುವುದನ್ನು ಅರಿತ ಆಕೆಯ ಗಂಡ ರವಿಕುಮಾರ್ ಶಕುಂತಲಾಳಿಗೆ ದಿಗ್ಬಂಧನ ಹೇರಿದ್ದ. ಇದಕ್ಕೆ ಆಕ್ರೋಶಗೊಂಡ ಶಕುಂತಲಾ ತನ್ನ ಪ್ರಿಯಕರ ಕಮಲ್ ಸಿಂಗ್ಲಾ ಜೊತೆ ಸೇರಿ ರವಿಕುಮಾರ್ ನನ್ನು ಹತ್ಯೆಗೈದು ರಾಜಸ್ಥಾನದಲ್ಲಿ ತಲೆಮರೆಸಿಕೊಳ್ಳುತ್ತಾಳೆ. ರವಿಕುಮಾರ್ ಕೊಲೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಶಕುಂತಲಾಳಿಗಾಗಿ ಹುಡುಕಾಟ ನಡೆಸಿ ಕೊನೆಗೆ ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ವರ್ಗಾಯಿಸಿದ್ದರು. ಇದೀಗ ಶಕುಂತಲಾಳನ್ನು ಪತ್ತೆಹಚ್ಚಿರುವ ಕ್ರೈಂ ಬ್ರಾಂಚ್ ತಂಡ ಆರೋಪಿಗಳಿಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ‌.

Also Read  ಉದ್ಯಾವರ: ನೇಣು ಬಿಗಿದು ಮಹಿಳೆ ಆತ್ಮಹತ್ಯೆ

 

 

 

error: Content is protected !!
Scroll to Top