ರೌಡಿಶೀಟರ್ ಮದುವೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ➤ ಡಿವೈಎಸ್ಪಿ, ಸರ್ಕಲ್ ಇನ್ಸ್‌ಪೆಕ್ಟರ್, ಎಸ್ಐ ಸಸ್ಪೆಂಡ್

(ನ್ಯೂಸ್ ಕಡಬ) newskadaba.com ಕೊಪ್ಪಳ, ಜು.21. ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ರೌಡಿ ಶೀಟರ್ ಓರ್ವನ ಮದುವೆಯಲ್ಲಿ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿ ಹಾರ ಹಾಕಿಸಿಕೊಂಡಿರುವ ಫೋಟೋಗಳು ವೈರಲ್​ ಆದ ಬೆನ್ನಲ್ಲೇ ಮೂವರು ಅಧಿಕಾರಿಗಳನ್ನು ಸುದೀರ್ಘ ರಜೆಯಲ್ಲಿ ಕಳುಹಿಸಲಾಗಿದೆ.

2015ರ ಜನವರಿಯಲ್ಲಿ ಕೊಪ್ಪಳ ರೇಲ್ವೆ ನಿಲ್ದಾಣದ ಬಳಿ ವಿದ್ಯಾರ್ಥಿಯೋರ್ವನ ಕೊಲೆಯಾಗಿತ್ತು. ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್ ಹನುಮೇಶ್ ನಾಯಕ್ ಮತ್ತು ಇವರ ಪುತ್ರ ಮಹಾಂತೇಶ ನಾಯಕ್​ ಸೇರಿದಂತೆ 9 ಮಂದಿ ಆರೋಪಿಗಳು ಜೈಲಿಗೆ ಹೋಗಿ ಜಾಮೀನು ಮೇಲೆ ಇತ್ತೀಚೆಗಷ್ಟೇ ಹೊರ ಬಂದಿದ್ದರು.‌ ಜು.18ರಂದು ಮಹಾಂತೇಶನ ಮದುವೆಯು ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಗಂಗಾವತಿಯ ಡಿವೈಎಸ್ಪಿ ರುದ್ರೇಶ್ ಉಜ್ಜಿನಕೊಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ಉದಯರವಿ, ಸಬ್ ಇನ್ಸ್‌ಪೆಕ್ಟರ್ ತಾರಾಬಾಯಿ ರಾಠೋಡ ಅವರು ಭಾಗವಹಿಸಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Also Read  ಕರಾವಳಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಅಭಿವೃದ್ದಿಗಾಗಿ ಕೆಂದ್ರಕ್ಕೆ ಪ್ರಸ್ತಾಪ ➤ ಸಚಿವ ಎಸ್.ಅಂಗಾರ

ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಜಿಲ್ಲಾ ಎಸ್ಪಿ ಮದುವೆಯಲ್ಲಿ ಪಾಲ್ಗೊಂಡ ಮೂವರು ಹಿರಿಯ ಅಧಿಕಾರಿಗಳನ್ನು ಸುದೀರ್ಘ ಕಡ್ಡಾಯ ರಜೆ ಮೇಲೆ ಎಸ್ಪಿ ಕಳುಹಿಸಿದ್ದಾರೆ.

 

 

 

error: Content is protected !!
Scroll to Top