(ನ್ಯೂಸ್ ಕಡಬ) newskadaba.com ರಾಮಕುಂಜ, ಜು. 19. ಎಸ್ಕೆಎಸ್ಸೆಸ್ಸೆಫ್ ಆತೂರು ಕಸ್ಟರ್ ವಿಖಾಯ ತಂಡ ಇದರ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಹಾಗು ಕೊಯಿಲ, ಆತೂರು, ರಾಮಕುಂಜ ಮತ್ತು ಗೋಳಿತ್ತಡಿ ಮುಂತಾದ ಸ್ಥಳದಲ್ಲಿ ಫಾಗಿಂಗ್ ಸಿಂಪಡಿಕೆ ಕಾರ್ಯವು ಶುಕ್ರವಾರದಂದು ನಡೆಯಿತು.
ಎಸ್ ಕೆ ಎಸ್ ಎಸ್ ಎಫ್ ಆತೂರು ಕಸ್ಟರ್ ವಿಖಾಯ ತಂಡ ಬೆಳಿಗ್ಗೆ ಮೆಸ್ಕಾಂ ಇಲಾಖೆಯವರ ಅಪೇಕ್ಷೆಯಂತೆ ಮರದ ಕೊಂಬೆಗಳು ವಿದ್ಯುತ್ ತಂತಿಗಳಿಗೆ ಬಿಳುವುದನ್ನು ಕಡಿದು ಲೈನ್ ಮ್ಯಾನ್ ಜೊತೆ ಕೈಜೋಡಿಸಿದರು. ಕೊಯಿಲ ಹಾಗು ರಾಮಕುಂಜ ಗ್ರಾಮ ಪೊಲೀಸ್ ಶಾಂತಿ ಸಭೆಗೆ ಆಗಮಿಸಿದ ಪುತ್ತೂರು ಉಪವಿಭಾಗ ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಹಾಗೂ ಕಡಬ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರುಕ್ಮ ನಾಯಕ್ ರವರು ಸ್ವಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರ ಸ್ವಚತೆ ಮಾಡಲಾಯಿತು. ಶಾಲೆ ಮುಖ್ಯ ಶಿಕ್ಷಕರು ಕೈ ಜೋಡಿಸಿದರು.
ಪುತ್ತೂರು ವೃತ್ತಿ ನಿರೀಕ್ಷಕರು ತಿಮ್ಮಪ್ಪ ನಾಯಕ್ ಫಾಗಿಂಗ್ ಸಿಂಪಡಿಕೆಗೆ ಚಾಲನೆ ನೀಡಿದರು. ಗೋಳಿತ್ತಡಿಯಿಂದ ಹಿಡಿದು ಕೊಯಿಲ ಪರಿಸರದ ಸಾರ್ವಜನಿಕ ಸ್ಥಳದಲ್ಲಿ, ರಾಮಕುಂಜ ಗ್ರಾಮ ಪಂಚಾಯತ್ ವಠಾರ, ಕೊಯಿಲ ಗ್ರಾಮ ಪಂಚಾಯತ್ ವಠಾರ, ಹಿರಿಯ ಪ್ರಾಥಮಿಕ ಆಸ್ಪತ್ರೆ ಆತೂರು ಪರಿಸರ, ನ್ಯಾಯ ಬೆಲೆ ಅಂಗಡಿ ಆತೂರು ಪರಿಸರ, ಬದ್ರಿಯಾ ಜುಮಾ ಮಸೀದಿ ಆತೂರು, ಮುಹಿಯ್ಯದ್ದೀನ್ ಜುಮಾ ಮಸೀದಿ, ಶ್ರೀ ರಾಮಕುಂಜೇಶ್ವರ ದೇವಸ್ಥಾನ ವಠಾರ ಹಾಗೂ ನೂರುಲ್ ಹುದಾ ಮದರಸ ನೀರಾಜೆ ಮುಂತಾದ ಸ್ಥಳದಲ್ಲಿ ಫಾಗಿಂಗ್ ಸಿಂಪಡಿಕೆ ಮಾಡಲಾಯಿತು. ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯತ್ ಗ್ರಾಮ ಕರಣಿಕ, ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯತ್ ಸದಸ್ಯರು, ಮಸೀದಿ ಹಾಗೂ ದೇವಸ್ಥಾನ ಆಡಳಿತ ಸಮಿತಿ ಸದಸ್ಯರು ಕೈ ಜೋಡಿಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೂ ಆತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಆತೂರು ಕಸ್ಟರ್ ವಿಖಾಯ ತಂಡ ಸ್ವಚ್ಚತೆ ಮಾಡಿದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸೇವೆಯ ಕುರಿತು ಪ್ರಶಂಸನೀಯ ಮಾತುಗಳನ್ನು ಹೇಳಿದರು. ಆತೂರು ಕಸ್ಟರ್ ಅಧ್ಯಕ್ಷರಾದ ಸಿದ್ದೀಕ್ ನೀರಾಜೆ ನೇತೃತ್ವದಲ್ಲಿ ಕಸ್ಟರ್ ಒಳಪಟ್ಟ ಎಲ್ಲಾ ವಿಖಾಯ ಕಾರ್ಯಕರ್ತರು ಭಾಗವಹಿಸಿ ಸಹಕರಿಸಿದರು.