ನೀರಿನ ಬಕೆಟ್‌ನಲ್ಲಿ ಮುಳುಗಿ ಒಂದೂವರೆ ವರ್ಷದ ಮಗು ಮೃತ್ಯು ➤ ಮಂಗಳೂರಿನಲ್ಲಿ ನಡೆಯಿತು ಹೃದಯವಿದ್ರಾವಕ ಘಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.17. ನೀರು ತುಂಬಿದ ಬಕೆಟ್ ಒಳಗಡೆ ಬಿದ್ದು ಒಂದೂವರೆ ವರ್ಷದ ಮಗುವೊಂದು ಮೃತಪಟ್ಟಿರುವ ದಾರುಣ ಘಟನೆ ನಗರದ ಹೊರವಲಯದ ಕಾಟಿಪಳ್ಳದಲ್ಲಿ ಶನಿವಾರದಂದು ನಡೆದಿದೆ.

ಕಾಟಿಪಳ್ಳ ನಿವಾಸಿ ನಝೀರ್ ಎಂಬವರ ಒಂದೂವರೆ ವರ್ಷ ಪ್ರಾಯದ ಮಗು ಮೃತಪಟ್ಟಿದ್ದು, ತಾಯಿ ಮನೆ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಲಗಿದ್ದ ಮಗು ಎಚ್ಚರಗೊಂಡು ಶೌಚಾಲಯದಲ್ಲಿದ್ದ ನೀರು ತುಂಬಿದ್ದ ಬಕೆಟ್‌ಗೆ ತಲೆ ಹಾಕಿದ್ದು, ಈ ವೇಳೆ ತಲೆಕೆಳಗಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಮೃತ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

Also Read  ಇಂದಿನ ಹೆಲ್ತ್ ಬುಲೆಟಿನ್ ► ದ.ಕ. 11, ಉಡುಪಿ 9 ಕೊರೋನಾ ಪ್ರಕರಣ

 

 

 

error: Content is protected !!
Scroll to Top