ಇಂದಿನಿಂದ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಕ್ತರಿಗೆ ಅವಕಾಶ..!

(ನ್ಯೂಸ್ ಕಡಬ) newskadaba.com ಶಬರಿಮಲೆ, ಜು. 17. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಿಂದ ಬಂದ್‌ ಆಗಿದ್ದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಿದ್ದು, ಭಕ್ತರಿಗೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.


ಇಂದಿನಿಂದ ಜುಲೈ 21ರ ವರೆಗೆ ಭಕ್ತರಿಗೆ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿದ್ದು, ದಿನಕ್ಕೆ ಐದು ಸಾವಿರ ಅಯ್ಯಪ್ಪ ಭಕ್ತರಿಗೆ ಮಾತ್ರ ಸ್ವಾಮಿಯ ದರ್ಶನವನ್ನು ಪಡೆಯಬಹುದಾಗಿದೆ ಎಂದು ತಿರುವಾಂಕೂರು ದೇವಸಂ ಮಂಡಳಿ ತಿಳಿಸಿದೆ. ಲಾಕ್ ಡೌನ್ ಬಳಿಕ ಕೊರೋನಾ ಸೋಂಕಿನ ಹಿನ್ನೆಲೆ ಭಕ್ತರಿಗೆ ಹಲವು ನಿಯಮಗಳನ್ನು ಹೇರಿಕೆ ಮಾಡಲಾಗಿದ್ದು, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬೇಕಾದರೆ, ಭಕ್ತರು ಕಡ್ಡಾಯವಾಗಿ ಕೊರೊನಾ ಲಸಿಕೆ ಹಾಕಿಸಿರುವ ರಿಪೋರ್ಟ್ ಇಲ್ಲವಾದರೆ 48 ಗಂಟೆಯೊಳಗೆ ಮಾಡಿಸಿದ ಆರ್‌ಟಿಪಿಸಿಆರ್‌ ರಿಪೋರ್ಟ್​ ಕಡ್ಡಾಯಗೊಳಿಸಲಾಗಿದೆ.‌

Also Read  WWE ಪ್ರಿಯರಿಗೆ ಟೇಕರ್ ಶಾಕ್ ➤ ಕುಸ್ತಿ ಅಂಗಳಕ್ಕೆ ವಿದಾಯ ಹೇಳಿದ "ಅಂಡರ್ ಟೇಕರ್"

error: Content is protected !!
Scroll to Top