(ನ್ಯೂಸ್ ಕಡಬ) Newskadaba.com ಬೆಂಗಳೂರು, ಜು. 17. ಕೊರೋನಾ ಎರಡನೇ ಅಲೆ ಮುಗಿಯುವ ಹೊತ್ತಲ್ಲೇ ಮೂರನೇ ಅಲೆಯ ಮುನ್ನೆಚ್ಚರಿಕೆ ಹೊರಬಿದ್ದಿದ್ದು, ಕಳೆದ ಭಾರಿಯ ಹಾಗಯೇ ಈ ಭಾರಿಯೂ ಬೆಂಗಳೂರಿನ ಪ್ರತಿಷ್ಠಿತ ಲಾಲ್ ಭಾಗ್ ಫಲಪುಷ್ಪ ಪ್ರದರ್ಶನ ರದ್ದಾಗಲಿದ್ದು, ಪ್ರವಾಸಿಗರಿಗೆ ನಿರಾಸೆ ಎದುರಾಗಿದೆ.
ಪ್ರತೀವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಲಾಲ್ ಭಾಗ್ ನಲ್ಲಿ ಆಕರ್ಷಕ ರೀತಿಯಲ್ಲಿ ಫಲಪುಷ್ಪ ಪ್ರದರ್ಶನ ನಡೆಸುವುದು ವಾಡಿಕೆ. ಆದರೆ ಕಳೆದ ವರ್ಷವೂ ಕೊರೋನಾ ಕಾರಣದಿಂದಾಗಿ ಫಲಪುಷ್ಪ ಪ್ರದರ್ಶನ ರದ್ದುಗೊಳಿಸಲಾಗಿತ್ತು. ಈ ವರ್ಷ ಎರಡನೇ ಅಲೆ ಕುಗ್ಗುತ್ತಿರುವ ವೇಳೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸುವ ಉತ್ಸಾಹದಲ್ಲಿದ್ದ ತೋಟಗಾರಿಕಾ ಇಲಾಖೆಗೆ ಈಗಾಗಲೇ ಮೂರನೇ ಅಲೆಯು ಬ್ರೇಕ್ ಹಾಕಿದೆ. ಫಲಪುಷ್ಪ ಪ್ರದರ್ಶನದ ವೇಳೆ ಇದರ ವೀಕ್ಷಣೆಗೆ ಸಾವಿರಾರು ಪ್ರೇಕ್ಷಕರು ಭೇಟಿ ನೀಡುತ್ತಿರುವ ಹಿನ್ನೆಲೆ ಸೋಂಕು ಹರಡುವ ಪ್ರಮಾಣ ಹೆಚ್ಚುವ ಸಾಧ್ಯತೆಯಿದ್ದು, ಇದರಿಂದಾಗಿ ಈ ವರ್ಷ ಫಲಪುಷ್ಪ ಪ್ರದರ್ಶನ ರದ್ದುಗೊಳಿಸಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.