ಹೆಂಡತಿಯ ನಗ್ನ ಫೋಟೋ ವಾಟ್ಸ್ಅಪ್ ನಲ್ಲಿ ನೋಡಿದ ಗಂಡ ➤ ಮುಂದೆ ಆಗಿದ್ದೇ ಬೇರೆ

(ನ್ಯೂಸ್ ಕಡಬ) newskadaba.com ಕಡಬ, ಜು.16. ಕಡಬದ ಯುವತಿಯ ದಾಂಪತ್ಯಕ್ಕೆ ಯುವಕನೋರ್ವ ಹುಳಿ ಹಿಂಡಿದ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದ್ದು, ಇದೀಗ ಯುವತಿಯ ಗಂಡ ವಿಚ್ಚೇದನಕ್ಕೆ ಮುಂದಾದ ಬಗ್ಗೆ ವರದಿಯಾಗಿದೆ.

ಸುಬ್ರಹ್ಮಣ್ಯದ ಯುವಕ ವಿಜೇಶ್ ಹಾಗೂ ಕಡಬದ 26 ವರ್ಷದ ಯುವತಿಯು ಪರಸ್ಪರ ಪ್ರೀತಿಸುತ್ತಿದ್ದು, 2016 ರಲ್ಲಿ ಆಕೆಯನ್ನು ಸುರತ್ಕಲ್ ನ ಲಾಡ್ಜ್ ಗೆ ಕರೆದೊಯ್ದು ದೈಹಿಕ ಸಂಪರ್ಕ ಮಾಡಿದ್ದಲ್ಲದೆ, ಆಕೆಯ ನಗ್ನ ಫೋಟೊ ಹಾಗೂ ವೀಡಿಯೋವನ್ನು ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ. ಯುವತಿಗೆ ಎರಡು ತಿಂಗಳ ಹಿಂದೆ ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ಆರೋಪಿ ಯುವಕನು ಯುವತಿಯ ನಗ್ನ ಫೋಟೋಗಳನ್ನು ಆಕೆಯ ಗಂಡನಿಗೆ ಕಳುಹಿಸಿದ್ದಾನೆ.

Also Read  ಪ್ರಥಮ ಪಿಯುಸಿ ಪೂರಕ ಪರೀಕ್ಷಾ ದಿನಾಂಕ ನಿಗದಿ ➤ ಜುಲೈ 16ರಿಂದ 27ರ. ಒಳಗೆ ಮುಗಿಸುವಂತೆ ಪಿಯು ಬೋರ್ಡ್ ಆದೇಶ

ನಗ್ನ ಫೋಟೋಗಳನ್ನು ಕಂಡ ಯುವತಿಯ ಗಂಡ ಇದೀಗ ವಿವಾಹ ವಿಚ್ಛೇದನಕ್ಕೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯುವತಿಯು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಯುವತಿಯನ್ನು ಅಪಹರಿಸಿ ಅತ್ಯಾಚಾರಗೈದ ಬಗ್ಗೆ ಪ್ರಕರಣ ದಾಖಲಾಗಿದೆ.

 

 

 

error: Content is protected !!
Scroll to Top