ಚರ್ಚೆಗೆ ಕಾರಣವಾದ ಕಡಬ ತಾಲೂಕು ಕ್ರೀಡಾಂಗಣ ವಿಚಾರ ➤ ಇಒ ನವೀನ್ ಭಂಡಾರಿ ಸ್ಪಷ್ಟನೆ

(ನ್ಯೂಸ್ ಕಡಬ) Newskadaba.com ಕಡಬ, ಜು. 14.ಸವಣೂರಿನಲ್ಲಿ ಅಭಿವೃದ್ದಿಯಾಗಲಿರುವ ಸುಮಾರು 1 ಕೋಟಿ ರೂ. ವೆಚ್ಚದ 400 ಮೀಟರ್ ವಿಸ್ತೀರ್ಣದ ಕ್ರೀಡಾಂಗಣಕ್ಕೂ ಕಡಬ ತಾಲೂಕು ಕ್ರೀಡಾಂಗಣಕ್ಕೂ ಯಾವುದೇ ಸಂಬಂಧವಿಲ್ಲ. ಕಡಬ ತಾಲೂಕು ಕ್ರೀಡಾಂಗಣ ಕಡಬ ಭಾಗದಲ್ಲಿಯೇ ನಿರ್ಮಾಣ ಮಾಡುವ ಕುರಿತು ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಪುತ್ತೂರು, ಕಡಬ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಸ್ವಷ್ಟನೆ ನೀಡಿದ್ದಾರೆ.


ಸವಣೂರು ಪ.ಪೂ.ಕಾಲೇಜಿನಲ್ಲಿ ನಿರ್ಮಾಣವಾಗಲಿರುವ ಕ್ರೀಡಾಂಗಣವು ಕಡಬ ತಾಲೂಕು ಕ್ರೀಡಾಂಗಣ ಎಂದು ಮಾಧ್ಯಮದಲ್ಲಿ ವರದಿಯಾಗಿದ್ದು, ಬಳಿಕ ಈ ಬಗ್ಗೆ ಹಲವರಿಂದ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಸಾಮಾಜಿಕ ಜಾಲತಾಣ ವ್ಯಾಟ್ಯಾಪ್ ನಲ್ಲಿ ಭಾರಿ ಚರ್ಚೆ ಕೂಡಾ ನಡೆದಿತ್ತು. ಈ ಹಿನ್ನೆಲೆಯಲ್ಲಿ ನವೀನ್ ಭಂಡಾರಿಯವರು ಸ್ವಷ್ಟನೆ ನೀಡಿ, ಸವಣೂರಿನಲ್ಲಿ 200 ಮೀಟರ್ ಉದ್ಯೋಗ ಖಾತರಿಯಲ್ಲಿ ಕ್ರೀಡಾಂಗಣ ಆಗಿತ್ತು, ಇನ್ನೂ ಅದನ್ನು ಅಭಿವೃದ್ದಿಪಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಈ ಬಗ್ಗೆ ಯಾವುದೇ ಗೊಂದಲ ಬೇಡ, ಕಡಬ ತಾಲೂಕು ಕ್ರೀಡಾಂಗಣಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ಹಂತದಲ್ಲಿದೆ, ಮುಂದಿನ ದಿನಗಳಲ್ಲಿ ಕಡಬ ಭಾಗದಲ್ಲಿಯೇ ತಾಲೂಕು ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.

Also Read  ಶಿರಾಡಿ: ತುಳು ಚಿತ್ರನಟ ರೂಪೇಶ್ ಶೆಟ್ಟಿಯವರ ಕಾರು ಅಪಘಾತ

ಕಡಬ ತಾಲೂಕು ಕ್ರೀಡಾಂಗಣ ನಿರ್ಮಿಸಲು ಈಗಾಗಲೇ ಕಡಬ ತಾಲೂಕು ಯುವಜನ ಒಕ್ಕೂಟ, ಜಿಲ್ಲಾ ಯುವಜನ ಒಕ್ಕೂಟ ವತಿಯಿಂದ ಕ್ರೀಡಾ ಇಲಾಖೆಗೆ ಮನವಿ ಸಲ್ಲಿಸಲಾಗಿದೆ, ಅಲ್ಲದೆ ಜಾಗವನ್ನು ಗುರುತಿಸಿ ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗುವುದು, ಅಲ್ಲದೆ ಪ್ರತಿ ಕಾಲೇಜಿನಲ್ಲಿ 400 ಮೀಟರ್ ಕ್ರೀಡಾಂಗಣ ನಿರ್ಮಾಣವಾಗಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ಹೇಳಿದ್ದಾರೆ, ಕಡಬ ತಾಲೂಕು ಕ್ರೀಡಾಧಿಕಾರಿ ಗಣೇಶ್ ಪಿ.ಯವರು ಕೂಡ ತಾಲೂಕು ಕ್ರೀಡಾಂಗಣಕ್ಕೆ ಸರಕಾರಿ ಸ್ಥಳ ಗುರುತಿಸಿ ತಹಸೀಲ್ದಾರ್ ಅವರಿಗೆ ಈ ಹಿಂದೆಯೇ ಮನವಿ ಸಲ್ಲಿಸಿದ್ದಾರೆ.

Also Read  ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

error: Content is protected !!
Scroll to Top