ಗುಂಡ್ಯ: ಕಾರುಗಳ ಮಧ್ಯೆ ಢಿಕ್ಕಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.13. ಮಾರುತಿ 800 ಹಾಗೂ ರಿಟ್ಝ್ ಕಾರಿನ ನಡುವೆ ಮುಖಾಮುಖಿ ಸಂಭವಿಸಿದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪ ನಡೆದಿದೆ.

ಹಾಸನದಿಂದ ನೆಲ್ಯಾಡಿ ಕಡೆಗೆ ತೆರಳುತ್ತಿದ್ದ ಮಾರುತಿ 800 ಹಾಗೂ ಧರ್ಮಸ್ಥಳದಿಂದ ಸಕಲೇಶಪುರ ಕಡೆಗೆ ತೆರಳುತ್ತಿದ್ದ ಕಾರುಗಳ ನಡುವೆ ಗುಂಡ್ಯ – ಉದನೆ ಮಧ್ಯೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರುಗಳೆರಡು ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕಸ ಹಾಕೋ ಕಿರಾತಕರಿಗೆ ಸ್ಪೆಷಲ್ ಬ್ಯಾನರ್ ರೆಡಿ ➤ ಬ್ಯಾನರ್ ನಲ್ಲಿ ಏನಿದೆ ಗೊತ್ತೇ.?!

 

 

 

error: Content is protected !!
Scroll to Top