ನಿಂತಿಕಲ್ಲು: ಈಝಿ ಹೋಮ್ ಟೆಕ್ಸ್ ಟೈಲ್ಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.12. ಇಲ್ಲಿಗೆ ಸಮೀಪದ ನಿಂತಿಕಲ್ಲು ಜಂಕ್ಷನ್ ನಲ್ಲಿರುವ ಧರ್ಮಶ್ರೀ ಆರ್ಕೇಡ್ ನಲ್ಲಿ ‘ಈಝಿ ಹೋಮ್ ಟೆಕ್ಸ್ ಟೈಲ್ಸ್’ ಸೋಮವಾರದಂದು ಶುಭಾರಂಭಗೊಂಡಿತು.

ಬೆಳ್ಳಾರೆ ವಾಣಿಜ್ಯ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ, ಕಾಮಧೇನು ಗ್ರೂಪ್‌ನ ಮಾಲಕರಾದ ಮಾಧವ ಗೌಡ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಯೂರ ಗೋಲ್ಡ್ ಪ್ಯಾಲೇಸ್ ನ ದೀಕ್ಷಿತ್ ಗೌಡ, ಆದಿತ್ಯ ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್ ನ ದಯಾನಂದ ಕೆ.ಎಸ್., ಕಾಮತ್ ಮೆಡಿಕಲ್ ನ ಸರಸ್ವತೀ ಕಾಮತ್, ಶಿವದುರ್ಗಾ ಹಾರ್ಡ್‌ವೇರ್ ನ ರಮೇಶ್ ಪಿ., ಕರಾವಳಿ ರಬ್ಬರ್ ನ ಶಮೀರ್ ಸೇರಿದಂತೆ ವಿವಿಧ ವರ್ತಕರು ಉಪಸ್ಥಿತರಿದ್ದರು. ನೂತನ ಸಂಸ್ಥೆಯಲ್ಲಿ ಉತ್ತಮ ದರ್ಜೆಯ ರೆಡಿಮೇಡ್ ಗಾರ್ಮೆಂಟ್ಸ್, ಕಿಡ್ಸ್ ವೇರ್ ಹಾಗೂ ಫೂಟ್ ವೇರ್ ಗಳು ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ದೊರೆಯಲಿದೆ ಎಂದು ಸಂಸ್ಥೆಯ ಮಾಲಕ ನೌಫಲ್ ಕಲಾಯಿ ತಿಳಿಸಿದ್ದಾರೆ.

Also Read  ಉಡುಪಿ: ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಢಿಕ್ಕಿ ➤ ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲೇ ಮೃತ್ಯು..!                                                

 

 

 

error: Content is protected !!
Scroll to Top