ಸುಬ್ರಹ್ಮಣ್ಯ: ‘ನ್ಯೂಸ್ ಕಡಬ’ದ ವರದಿಗೆ ಸ್ಪಂದಿಸಿದ ಅಧಿಕಾರಿಗಳು ➤ ರಾಜ್ಯ ಹೆದ್ದಾರಿಯ ಅಪಾಯಕಾರಿ ಮರದ ದಿಮ್ಮಿ ತೆರವು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.12. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಹೆದ್ದಾರಿಯಲ್ಲಿ ಅಡ್ಡಲಾಗಿದ್ದ ಬೃಹತ್ ಗಾತ್ರದ ಮರದ ದಿಮ್ಮಿಯನ್ನು ನ್ಯೂಸ್ ಕಡಬದ ವರದಿ ಬಂದ ಬೆನ್ನಲ್ಲೇ ಇಂದು ತೆರವುಗೊಳಿಸಲಾಗಿದೆ.

ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಲ್ಕುಂದ ಸುಬ್ರಹ್ಮಣ್ಯ ಮಧ್ಯೆ ಅಪಾಯಕಾರಿ ತಿರುವಿನಲ್ಲಿ ಬೃಹತ್ ಗಾತ್ರದ ಮರವೊಂದು ತಿಂಗಳ ಹಿಂದೆ ರಸ್ತೆಗಡ್ಡವಾಗಿ ಬಿದ್ದಿತ್ತು. ಅದರ ಒಂದು ತುದಿಯನ್ನು ತುಂಡರಿಸಿ ಕೊಂಡೊಯ್ಯಲಾಗಿದ್ದು, ಇನ್ನೊಂದು ದಿಮ್ಮಿ ರಸ್ತೆಯಲ್ಲೇ ಬಾಕಿಯಾಗಿದೆ. ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆಯ ಮೂಲಕ ಸಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿರಲಿಲ್ಲ. ಈ ಅಪಾಯಕಾರಿ ಮರದ ಬಗ್ಗೆ ಸೋಮವಾರದಂದು ನ್ಯೂಸ್ ಕಡಬದಲ್ಲಿ ವರದಿ ಪ್ರಕಟವಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಪಿಡಬ್ಲ್ಯೂಡಿ ಅಧಿಕಾರಿಗಳು ಮರದ ದಿಮ್ಮಿಯನ್ನು ತೆರವುಗೊಳಿಸಿದ್ದಾರೆ.

Also Read  ಮಳೆಗೆ ಮನೆಯ ಮೇಲ್ಛಾವಣಿ ಕುಸಿತ ➤ ಪ್ರಾಣಾಪಾಯದಿಂದ ಪಾರಾದ ಎಂಟು ಮಂದಿ

 

 

 

error: Content is protected !!
Scroll to Top