ಆರ್ಥೊಡಾಕ್ಸ್ ಸಭೆಯ ಪರಮಾಧ್ಯಕ್ಷ ಬೆಸಿಲಿಯೊಸ್ ಮಾರ್ಥೋಮಾ ಪಾಲ್ || ವಿಧಿವಶ

ಕೇರಳ, ಜು.12. ಆರ್ಥೊಡಾಕ್ಸ್ ಸಭೆಯ ಪರಮಾಧ್ಯಕ್ಷರಾದ ಸೈಂಟ್ ಬೆಸಿಲಿಯೊಸ್ ಮಾರ್ಥೋಮಾ ಪಾಲ್ II ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ.

ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಇವರನ್ನು ಪರುಮಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೇರಳದ ಕೊಟ್ಟಾಯಂ ನಲ್ಲಿರುವ ಮಲಂಕರ ಆರ್ಥೊಡಾಕ್ಸ್ ಸಭೆಯ ಆಗುಹೋಗುಗಳನ್ನು ತಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಿಂದಲೇ ನಡೆಸುತ್ತಿದ್ದರು. ಮೃತರ ಗೌರವಾರ್ಥ ಮಲಂಕರ ಆರ್ಥೋಡಾಕ್ಸ್ ಸಭೆಯ ಎಲ್ಲಾ ದೇವಾಲಯಗಳಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ ಸಂತಾಪ ವ್ಯಕ್ತಪಡಿಸಲಾಗಿದೆ.

 

Also Read  ಶಿರೂರು ಗುಡ್ಡ ಕುಸಿತ ಪ್ರಕರಣ..!    ಓರ್ವ ಮಹಿಳೆಯ ಮೃತದೇಹ ಪತ್ತೆ

 

 

error: Content is protected !!
Scroll to Top