ಸುಬ್ರಹ್ಮಣ್ಯ: ರಾಜ್ಯ ಹೆದ್ದಾರಿಯಲ್ಲೊಂದು ಅಪಾಯಕಾರಿ ಮರದ ದಿಮ್ಮಿ ➤ ತಿಂಗಳು ಕಳೆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜು.12. ಬೃಹತ್ ಗಾತ್ರದ ಮರದ ದಿಮ್ಮಿಯೊಂದು ಹೆದ್ದಾರಿಗೆ ಬಿದ್ದು ತಿಂಗಳು ಕಳೆದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇನ್ನೂ ತೆರವು ಭಾಗ್ಯ ಕಂಡಿಲ್ಲ.

ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕುಲ್ಕುಂದ ಸುಬ್ರಹ್ಮಣ್ಯ ಮಧ್ಯೆ ಅಪಾಯಕಾರಿ ತಿರುವಿನಲ್ಲಿ ಬೃಹತ್ ಗಾತ್ರದ ಮರವೊಂದು ತಿಂಗಳ ಹಿಂದೆ ರಸ್ತೆಗಡ್ಡವಾಗಿ ಬಿದ್ದಿತ್ತು. ಅದರ ಒಂದು ತುದಿಯನ್ನು ತುಂಡರಿಸಿ ಕೊಂಡೊಯ್ಯಲಾಗಿದ್ದು, ಇನ್ನೊಂದು ದಿಮ್ಮಿ ರಸ್ತೆಯಲ್ಲೇ ಬಾಕಿಯಾಗಿದೆ. ದಿನಂಪ್ರತಿ ಸಾವಿರಾರು ವಾಹನಗಳು ಈ ರಸ್ತೆಯ ಮೂಲಕ ಸಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಅಪಾಯಕಾರಿ ಮರದ ದಿಮ್ಮಿಯಿಂದಾಗಿ ಅಪಘಾತ ಸಂಭವಿಸಿದರೆ ಯಾರು ಹೊಣೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

Also Read  ಪಂಜ: ಮೂಲಭೂತ ಸಮಸ್ಯೆಯ ಬಗ್ಗೆ ಪ್ರಧಾನಮಂತ್ರಿಗೆ ಸಿ.ಡಿ ಕಳುಹಿಸಿದ ಹೋರಾಟ ಸಮಿತಿ

 

 

 

error: Content is protected !!
Scroll to Top