ಕೂಲಿ ಕಾರ್ಮಿಕ ದಂಪತಿಯ ಪುಟ್ಟ ಮಗುವಿನ ಅಪಹರಣ ➤ ಸಿಸಿ ಟಿವಿಯಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಉಡುಪಿ, ಜು.11. ಕೂಲಿ ಕಾರ್ಮಿಕ ದಂಪತಿಯ ಪುಟ್ಟ ಮಗುವೊಂದನ್ನು ಉಡುಪಿಯಿಂದ ಕಿಡಿಗೇಡಿಯೊಬ್ಬ ಅಪಹರಿಸಿದ್ದು, ಆರೋಪಿ ಮಗುವನ್ನು ಎತ್ತಿಕೊಂಡು ಬಸ್‌ ಹತ್ತುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಾಪತ್ತೆಯಾದ ಮಗುವನ್ನು ಬಾಗಲಕೋಟೆ ಜಿಲ್ಲೆಯ ಮುದೋಳ ತಾಲೂಕಿನ ಭಾರತಿ ಮತ್ತು ಅರುಣ್ ದಂಪತಿಯ ಪುತ್ರ ಎರಡೂವರೆ ವರ್ಷದ ಶಿವರಾಜ್ ಎಂದು ಗುರುತಿಸಲಾಗಿದೆ. ದಂಪತಿಗೆ ಪರಿಚಿತನಾಗಿರುವ ಪರಶು ಎಂಬಾತ ಕೃತ್ಯ ಎಸಗಿರುವ ಸಂಶಯವಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿ ಪರಶು ಕೆಲವು ದಿನಗಳ ಹಿಂದಷ್ಟೇ ದಂಪತಿಗೆ ಪರಿಚಿತನಾಗಿದ್ದ. ಪ್ರತಿದಿನ ಮಗುವಿಗೆ ಚಾಕ್‌ಲೇಟ್‌ ಕೊಡಿಸಿ ಸಲುಗೆ ಬೆಳೆಸಿಕೊಂಡಿದ್ದ. ಭಾನುವಾರ ಬೆಳಿಗ್ಗೆ ತಿಂಡಿ ಕೊಡಿಸಿಕೊಂಡು ಬರುವುದಾಗಿ ಮಗುವನ್ನು ಕರೆದೊಯ್ದು ಮರಳಿ ಬಂದಿಲ್ಲ ಎಂದು ಪೋಷಕರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರೋಪಿಯು ಮಗುವನ್ನು ಎತ್ತಿಕೊಂಡು ಕುಂದಾಪುರ ಕಡೆಗೆ ತೆರಳುವ ಬಸ್ ಹತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Also Read  ಸೇನಾ ಮುಖ್ಯಸ್ಥ ಸಹಿತ 14 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ ➤ 7 ಮಂದಿ ದುರ್ಮರಣ

 

 

 

error: Content is protected !!
Scroll to Top