ಪ್ರಧಾನಿ ನರೇಂದ್ರ ಮೋದಿಯ ಮನೆ ಮೇಲೆಯೂ ರೈಡ್ ಆಗಲಿ ➤ ಡಿ.ವಿ. ಸದಾನಂದ ಗೌಡರ ಹಳೆಯ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.09. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನೆಯ ಮೇಲೆಯೂ ಐಟಿ ರೇಡ್ ಆಗಬೇಕು ಎಂಬ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಹೇಳಿಕೆಯು ಇದೀಗ ವೈರಲ್ ಆಗುತ್ತಿದೆ.

ಡಿ.ವಿ. ಸದಾನಂದ ಗೌಡ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಗೌಡರು ವರ್ಷದ ಹಿಂದೆ ಹೇಳಿದ್ದಾರೆನ್ನಲಾದ ಖಾಸಗಿ ದೃಶ್ಯ ಮಾಧ್ಯಮದ ವೀಡಿಯೋ ತುಣುಕು ವೈರಲ್ ಆಗುತ್ತಿದೆ. ರಾಜಕೀಯ ಎಂದರೆ ವ್ಯಾಪಾರವಾಗಿದ್ದು, ಹಣ ಹಾಕಿ ಹಣವನ್ನು ವಾಪಾಸ್ ತೆಗೆಯಲಾಗುತ್ತಿದೆ. ಇದಕ್ಕೆ ಬಿಜೆಪಿ ಕೂಡ ಹೊರತಾಗಿಲ್ಲ. ಎಲ್ಲಾ ಪಕ್ಷದಲ್ಲೂ ಇಂತಹ ರಾಜಕಾರಣ ನಡೆಯುತ್ತಿದ್ದು, ಶೇ. 25ರಷ್ಟು ಮಂದಿ ಮಾತ್ರ ಒಳ್ಳೆಯವರು ಇದ್ದಾರೆ. ಉಳಿದ ಶೇ.75 ರಷ್ಟು ಮಂದಿ ಹಣ ಮಾಡುವುದರಲ್ಲೇ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಗ್ರಾಮ ಪಂಚಾಯತ್ ಅಧ್ಯಕ್ಷರವರೆಗೆ ಎಲ್ಲಾ ರಾಜಕಾರಣಿಗಳ ಮನೆಗೂ ರೈಡ್ ಆಗಲಿ ಎಂದು ಅವರು ಹೇಳಿರುವ ವೀಡಿಯೋ ಇದೀಗ ಹರಿದಾಡುತ್ತಿದೆ.

Also Read  ಗ್ರಹಣಕ್ಕೆ ಮೊದಲು ಊರು ಬಿಡದಿದ್ದಲ್ಲಿ ಸಾವು ಸಂಭವಿಸಲಿದೆಯೆಂದ ಜ್ಯೋತಿಷಿ ► ಜ್ಯೋತಿಷಿಯ ಮಾತಿಗೆ ಹೆದರಿ ಗ್ರಾಮ ತೊರೆದ 60 ಕುಟುಂಬಗಳು

 

 

 

error: Content is protected !!
Scroll to Top