ಟ್ರ್ಯಾಕ್ಟರ್ ನ ಚಕ್ರದಡಿಯಲ್ಲಿ ಸಿಲುಕಿ 5 ವರ್ಷದ ಮಗು ಮೃತ್ಯು ➤ ಬೇಸತ್ತ ಚಾಲಕ ಆತ್ಮಹತ್ಯೆಗೆ ಶರಣು

(ನ್ಯೂಸ್ ಕಡಬ) Newskadaba.com ಚಾಮರಾಜನಗರ, ಜು. 09. ಕ್ರಿಕೆಟ್ ಮೈದಾನವನ್ನು ಸಮತಟ್ಟು ಮಾಡುತ್ತಿದ್ದ ವೇಳೆ ಟ್ರ್ಯಾಕ್ಟರ್ ನಡಿಗೆ ಸಿಲುಕಿ ಐದು ವರ್ಷದ ಮಗು ಮೃತಪಟ್ಟಿದ್ದು, ಇದರಿಂದ ಬೇಸತ್ತ ಟ್ರ್ಯಾಕ್ಟರ್ ಚಾಲಕ ಕೂಡಾ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಂಡ್ಲುಪೇಟೆ ತಾಲೂಕಿನ ಸವಕನಹಳ್ಳಿ ಪಾಳ್ಯ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಟ್ರ್ಯಾಕ್ಟರ್ ನಡಿಗೆ ಸಿಲುಕಿ ಮೃತಪಟ್ಟ ಮಗುವನ್ನು ಸವಕನಹಳ್ಳಿ ಪಾಳ್ಯ ಗ್ರಾಮದ ಮುದ್ದ ಹಾಗೂ ನಾಗಮಣಿ ದಂಪತಿಯ ಪುತ್ರ ಹರ್ಷ (5) ಎಂದು ಗುರುತಿಸಲಾಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆಗೊಳಗಾದ ಚಾಲಕನನ್ನು ಸುನೀಲ್ (28) ಎಂದು ಗುರುತಿಸಲಾಗಿದೆ. ಇಲ್ಲಿನ ಹೊರವಲಯದಲ್ಲಿರುವ ಕ್ರಿಕೆಟ್ ಮೈದಾನವನ್ನು ಸಮತಟ್ಟು ಮಾಡಲೆಂದು ಯುವಕರು ಮೂರು ಟ್ರ್ಯಾಕ್ಟರ್ ಗಳನ್ನು ತೆಗೆದುಕೊಂಡು ಹೋಗಿದ್ದು, ಅವರ ಜೊತೆ ಐದರ ಹರೆಯದ ಬಾಲಕ ಹರ್ಷ ಕೂಡಾ ತೆರಳಿದ್ದನು. ಈ ಸಂದರ್ಭ ಸುನಿಲ್ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ನ ಹಿಂಭಾಗದ ಚಕ್ರದಡಿಯಲ್ಲಿ‌ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಸುನೀಲ್ ಮೈಸೂರಿಗೆ ತೆರಳಿ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಸು ತಿಳಿದುಬಂದಿದೆ.

Also Read  ಬಿಸಿರೋಡು: ಕ್ಷುಲ್ಲಕ ವಿಚಾರಕ್ಕೆ ಚೂರಿ ಇರಿದು ಯುವಕನ ಕೊಲೆ

error: Content is protected !!
Scroll to Top